ಮಾನ್ಯರೆ ಪೋಷಕರೇ ಮತ್ತು ನನ್ನ ಪ್ರೀತಿಯ ಸ್ಪರ್ದಾರ್ಥಿಗಳೇ

ಒಂದು ಮೌನದ ಮಾತು ನಿಮಗಾಗಿ

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂಬುದು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ​ನನ್ನ ತಿಳುವಳಿಕೆಯಂತೆ, ಅಧಿಕಾರವು ಜನರಿಗೆ ಸೇವೆ ಸಲ್ಲಿಸುವ ಪ್ರಾಮಾಣಿಕ ಉದ್ದೇಶ ಹೊಂದಿರುವವರ ಕೈಯಲ್ಲಿರಬೇಕು. ಏಕೆಂದರೆ ಆಡಳಿತವು ನಾಗರಿಕರ ಜೀವನದ ಮೇಲೆ, ಅದರಲ್ಲೂ ಮುಖ್ಯವಾಗಿ ಬಡವರು, ರೈತರು ಮತ್ತು ದುರ್ಬಲ ವರ್ಗದವರ ಮೇಲೆ ನೇರ ಪರಿಣಾಮ ಬೀರುತ್ತದೆ.

ಸೇವಾ ಮನೋಭಾವದ ವ್ಯಕ್ತಿ ಅಧಿಕಾರ ಹಿಡಿದಾಗ:

  • ​ನಿರ್ಧಾರಗಳು ಜನಕೇಂದ್ರೀಯವಾಗುತ್ತವೆ.
  • ಪಾರದರ್ಶಕತೆ ಹೆಚ್ಚುತ್ತದೆ.
  • ಸರದಿಯ ಕೊನೆಯಲ್ಲಿ ನಿಂತ ವ್ಯಕ್ತಿಗೂ ನ್ಯಾಯ ಸಿಗುತ್ತದೆ.

ಆದರೆ, ಆಯ್ಕೆಗಿಂತ ಮುಂಚೆಯೇ ಒಬ್ಬರ ” ಸೇವಾ ಉದ್ದೇಶ “ವನ್ನು ನಾವು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಮ್ಮ ವ್ಯವಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆಗಳು, ತರಬೇತಿ ಮತ್ತು ನಿರಂತರ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಬಳಸುತ್ತದೆ.

​ಆದರೆ ನನ್ನ ವೈಯಕ್ತಿಕ ನಂಬಿಕೆ ಬಹಳ ಸ್ಪಷ್ಟವಾಗಿದೆ —
“ಹೃದಯದಲ್ಲಿ ಸೇವೆಯ ತುಡಿತವಿದ್ದರೆ, ಅಧಿಕಾರವು ಅರ್ಥಪೂರ್ಣವಾಗುತ್ತದೆ. ಒಂದು ವೇಳೆ ಹೃದಯದಲ್ಲಿ ಸ್ವಾರ್ಥವಿದ್ದರೆ, ಎಂತಹ ದೊಡ್ಡ ಅಧಿಕಾರವೂ ಹಾನಿಕಾರಕವಾಗುತ್ತದೆ.”

ಅದಕ್ಕಾಗಿಯೇ ನಾನು ” ಜನಸೇವಾ ಆಡಳಿತ ” ಎಂಬ ತತ್ವವನ್ನು ಬಲವಾಗಿ ನಂಬುತ್ತೇನೆ. ಇಲ್ಲಿ ಆಡಳಿತವು ವ್ಯಕ್ತಿಯ ಸ್ಥಾನದ ಸುತ್ತಲಲ್ಲ, ಜನರ ಸುತ್ತ ಕೇಂದ್ರಿತವಾಗಿರುತ್ತದೆ.

ಕೊನೆಯದಾಗಿ, ನಾನು ಹೇಳಬಯಸುವುದಿಷ್ಟೇ:

“ಅಧಿಕಾರವು ನಾಯಕರನ್ನು ಸೃಷ್ಟಿಸಬಾರದು… ಸೇವೆಯು ನಾಯಕರನ್ನು ಸೃಷ್ಟಿಸಬೇಕು.”

​ ಧನ್ಯವಾದಗಳು. 

ಇಂತಿ, 

ನಿಮ್ಮ ನಂಬುಗೆಯ ಪ್ರತಿಷ್ಠಾನ

ಅಧ್ಯಾಯ 1

ಬದಲಾವಣೆಯ ಬಿತ್ತನೆ - ನಮ್ಮ ಸಂಕಲ್ಪ

ಶೀರ್ಷಿಕೆ: ನಮಗೆ ನಿಮ್ಮ ಅಂಕಗಳಿಗಿಂತ (ಸಾಧನೆಗಿಂತ) ನಿಮ್ಮ ವ್ಯಕ್ತಿತ್ವ ಮುಖ್ಯ!

 “ಪ್ರತಿ ದೊಡ್ಡ ಬದಲಾವಣೆ ಒಂದು ಚಿಕ್ಕ ಸಂಕಲ್ಪದಿಂದಲೇ ಆರಂಭವಾಗುತ್ತದೆ… 

ಆ ಸಂಕಲ್ಪ ನೈತಿಕವಾಗಿದ್ದರೆ, ಅದರ ಪರಿಣಾಮ ಸಮಾಜದ ಮೇಲೆ ಶಾಶ್ವತವಾಗಿರುತ್ತದೆ.” 

ಇಂದು ದೇಶಾದ್ಯಂತ ಸಾವಿರಾರು ತರಬೇತಿ ಕೇಂದ್ರಗಳು ಹುಟ್ಟಿಕೊಂಡಿವೆ. ಲಕ್ಷಾಂತರ ರೂಪಾಯಿ ಹಣ ಕಟ್ಟಿದರೆ ಪ್ರವೇಶ ಸಿಗುತ್ತದೆ, ಹಗಲು-ರಾತ್ರಿ ಪುಸ್ತಕ ಓದಿದರೆ ರ‍್ಯಾಂಕ್ ಸಿಗುತ್ತದೆ.  ಆದರೆ, ಆ ರ‍್ಯಾಂಕ್ ಪಡೆದ ಅಧಿಕಾರಿಗಳಲ್ಲಿ ಜನಸಾಮಾನ್ಯರ ನೋವಿಗೆ ಮಿಡಿಯುವ ‘ಜೀವ’ ಮತ್ತು ಫೈಲುಗಳ ಹಿಂದೆ ಅಡಗಿರುವ ಬಡವನ ಕಣ್ಣೀರು ಕಾಣುವ ‘ದೃಷ್ಟಿ’ ಉಳಿದಿದೆಯೇ? ಎಂಬುದು ಇಂದಿನ ದೊಡ್ಡ ಪ್ರಶ್ನೆ.

ಪ್ರತಿಷ್ಠಾನ ಐಎಎಸ್ ಅಕಾಡೆಮಿಯ ಈ ‘ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ’ ಎಂಬ ಸಂಕಲ್ಪ ಕೇವಲ ಒಂದು ಅಕಾಡೆಮಿಯ ತರಬೇತಿ ಕಾರ್ಯಕ್ರಮವಲ್ಲ. ಇದು ಭ್ರಷ್ಟಾಚಾರದ ವಿರುದ್ಧ, ಅಶಿಸ್ತಿನ ವಿರುದ್ಧ ಮತ್ತು ಮೌಲ್ಯಹೀನ ಆಡಳಿತದ ವಿರುದ್ಧ ಹೂಡಿರುವ ಮೌನ ಸಮರ.  ನಮ್ಮ ಆಶಯ ಸ್ಪಷ್ಟವಾಗಿದೆ : ನಮಗೆ ಕೇವಲ ಬುದ್ಧಿವಂತರು ಬೇಡ, ಸಮಾಜಕ್ಕೆ ಬೇಕಿರುವುದು ನೈತಿಕತೆ , ಧರ್ಮನಿಷ್ಠೆ  ಮತ್ತು ಜನಸೇವೆಯ ಬದ್ದತೆಯುಳ್ಳ  ಅಧಿಕಾರಿಗಳು’!

ಪೋಷಕರೇ ಗಮನಿಸಿ:

ನಿಮ್ಮ ಮಕ್ಕಳಿಗೆ ನೀವು ನೀಡಬೇಕಾದದ್ದು ಕೇವಲ ಶಿಕ್ಷಣವಲ್ಲ…ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮೌಲ್ಯಗಳು. ಅಧಿಕಾರಿ ಆಗುವುದು ಸಾಧನೆ ಆಗಬಹುದು.  ಆದರೆ, ಒಬ್ಬ ನೈತಿಕ ವ್ಯಕ್ತಿಯಾಗಿ ಉಳಿಯುವುದು ಮಾತ್ರ ಸಮಾಜಕ್ಕೆ ಆಶೀರ್ವಾದ ಮತ್ತು  ನಿಮಗೆ ಹೆಮ್ಮೆ. 

ನಿಮ್ಮ ಮಗ ಅಥವಾ ಮಗಳಿಗೆ ಈ ಅಕಾಡೆಮಿ ಕೇವಲ ಪಠ್ಯದ ಪಾಠ ಮಾಡುವುದಿಲ್ಲ, ಬದಲಿಗೆ ಅವರಿಗೆ ‘ಸಂಸ್ಕಾರ’ ಮತ್ತು ಜವಾಬ್ದಾರಿ’ಯನ್ನು ಕಲಿಸುತ್ತದೆ. ಇಲ್ಲಿ ಅಧಿಕಾರಕ್ಕಿಂತ  ಪವಿತ್ರವಾದದ್ದು ‘ಚಾರಿತ್ರ್ಯ’. ಅಶಿಸ್ತಿಗೆ ಇಲ್ಲಿ ಜಾಗವಿಲ್ಲ ಮತ್ತು ಮೌಲ್ಯಹೀನತೆಗೆ ಇಲ್ಲಿ ಮನ್ನಣೆಯಿಲ್ಲ. ನಿಮ್ಮ ಮಕ್ಕಳಿಗಾಗಿ ಮತ್ತು ಉತ್ತಮ ಸಮಾಜಕ್ಕಾಗಿ ನೀವು ನಮ್ಮೊಂದಿಗೆ ಕೈ ಜೋಡಿಸಿ.

ಯುವ ಆಕಾಂಕ್ಷಿಗಳೇ:

ನಿಮ್ಮ ಕನಸು ಕೇವಲ ಹುದ್ದೆಯಾಗಿರಬಾರದು… ಅದು ಜನರ ಬದುಕು ಬದಲಿಸುವ ಶಕ್ತಿಯಾಗಿರಬೇಕು.

ಈ ನೈತಿಕ ಪಥದ ಮೊದಲ ಹೆಜ್ಜೆ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತದೆ:

“ನೀವು ಯಾವ ರೀತಿಯ ವ್ಯಕ್ತಿಯಾಗಬೇಕು?”

ಈ ಪ್ರಶ್ನೆಗೆ ನಿಮ್ಮ ಉತ್ತರವೇ — ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ

ಈ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯು ನಿಮ್ಮ ಪುಸ್ತಕದ ಜ್ಞಾನವನ್ನು ಕೇಳುವುದಿಲ್ಲ., ಬದಲಿಗೆ ನಿಮ್ಮ ‘ನೈತಿಕ ಸ್ಥಿರತೆಯನ್ನು’ ಪರೀಕ್ಷಿಸುತ್ತದೆ. ನಿಮ್ಮಲ್ಲಿ ಸಮಾಜದ ಕತ್ತಲೆಯನ್ನು ಹೋಗಲಾಡಿಸುವ ಕಿಚ್ಚಿದ್ದರೆ, ಪ್ರತಿಷ್ಠಾನ ಅಕಾಡೆಮಿ ನಿಮ್ಮ ಪಾಲಿನ ಭದ್ರವಾದ ದಾರಿದೀಪವಾಗಲಿದೆ.

ಬನ್ನಿ, ಕರ್ನಾಟಕದ ಪ್ರತಿಯೊಂದು ತಾಲ್ಲೂಕಿನಿಂದ ಒಬ್ಬೊಬ್ಬ ಧೀಮಂತ ಅಧಿಕಾರಿಯನ್ನು ಸೃಷ್ಟಿಸೋಣ. ನಮ್ಮ ಈ ಪಯಣ ಕೇವಲ ತರಬೇತಿಗಾಗಿ ಅಲ್ಲ, ಇದು ಜನಪರ ಆಡಳಿತದ ಹೊಸ ಪೀಳಿಗೆಯ ಪುನರ್ನಿರ್ಮಾಣಕ್ಕಾಗಿ!.  

ಅಧ್ಯಾಯ 2

ವಾಸ್ತವಿಕ ಸತ್ಯದ ಅನಾವರಣ - ನಾವೆತ್ತ ಸಾಗುತ್ತಿದ್ದೇವೆ?

ಶೀರ್ಷಿಕೆ: ಸಾಧಿಸುವ ವಯಸ್ಸಿನಲ್ಲಿ ಬದುಕು ಸುಟ್ಟುಕೊಳ್ಳಬೇಕೇ?

“ಬದುಕನ್ನು ರೂಪಿಸಿಕೊಳ್ಳಬೇಕಾದ ಹರೆಯದಲ್ಲಿ…

ಅನೇಕ ಆಕರ್ಷಣೆಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ.

ಸಾಧನೆಯ ಅಗ್ನಿ ಹೊತ್ತಿಕೊಳ್ಳಬೇಕಾದ ಸಮಯದಲ್ಲೇ…

ಕ್ಷಣಿಕ ಸುಖದ ಹೊಗೆ… ಭವಿಷ್ಯವನ್ನು ಮಸುಕಾಗಿಸುತ್ತಿದೆ.”

ಓದಿ ಅಧಿಕಾರಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಾದ ಅನೇಕ ಪ್ರತಿಭೆಗಳು, ಇಂದು ಮೊಬೈಲ್ ಸ್ಕ್ರೀನ್‌ಗಳ ಮೋಹಕ್ಕೆ ಮತ್ತು ಅರ್ಥಹೀನ ಸಂಬಂಧಗಳ ಸುಳಿಗೆ ಸಿಲುಕಿ ತಮ್ಮ ಭವಿಷ್ಯವನ್ನು ತಾವೇ ಸುಟ್ಟುಕೊಳ್ಳುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಶಾಶ್ವತವಾದ ಗುರಿಯನ್ನು ಬಲಿಕೊಡುತ್ತಿರುವುದು ಇಂದಿನ ಯುವ ಪೀಳಿಗೆಯ ದೊಡ್ಡ ದುರಂತ.

ಪ್ರಕರಣ 1 : ಕಳೆದುಹೋದ ಕನಸು

ರಾಜು (ಹೆಸರು ಬದಲಾಯಿಸಲಾಗಿದೆ) ಉತ್ತರ ಕರ್ನಾಟಕದ ಹಳ್ಳಿಯಿಂದ ಐಎಎಸ್ ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದ. ತಂದೆ ಹೊಲ ಅಡವಿಟ್ಟು ಹಣ ನೀಡಿದ್ದರು. ಆದರೆ ಬೆಂಗಳೂರಿನ ಬಣ್ಣದ ಲೋಕಕ್ಕೆ ಮಾರುಹೋದ ರಾಜು, ಶಿಸ್ತಿನ ಕೊರತೆಯಿಂದಾಗಿ ರಾತ್ರಿಯಿಡೀ ಮೊಬೈಲ್ ಚಾಟಿಂಗ್ ಮತ್ತು ಅಲೆದಾಟದಲ್ಲಿ ಕಾಲ ಕಳೆದ. ಎರಡು ವರ್ಷದ ನಂತರ ಅವನ ಕೈಯಲ್ಲಿ ಒಂದು ಸಣ್ಣ ಹುದ್ದೆಯೂ ಇರಲಿಲ್ಲ, ತಂದೆ ಮಾಡಿದ ಸಾಲದ ಹೊರೆ ಮಾತ್ರ ಇತ್ತು.

ನೀತಿ ಪಾಠ : ಮಾರ್ಗದರ್ಶನವಿಲ್ಲದ ಜ್ಞಾನ ಮತ್ತು ಶಿಸ್ತಿಲ್ಲದ ಬುದ್ಧಿವಂತಿಕೆ ಕೇವಲ ಪಶ್ಚಾತ್ತಾಪವನ್ನಷ್ಟೇ ನೀಡುತ್ತದೆ.

ಪ್ರಕರಣ: 2 : ಚದುರಿದ ಗುರಿ

ಚಂಚಲ (ಹೆಸರು ಬದಲಾಯಿಸಲಾಗಿದೆ) ಪೋಷಕರ ಏಕೈಕ ಭರವಸೆಯಾಗಿದ್ದಳು. ಆದರೆ ನಗರದ ಸ್ವತಂತ್ರ ವಾತಾವರಣಕ್ಕೆ ಬಂದವಳೇ ಸಾಮಾಜಿಕ ಜಾಲತಾಣಗಳ ಮಾಯಾಲೋಕಕ್ಕೆ ಬಿದ್ದಳು. ಅಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಜೊತೆಗಿನ ‘ಕ್ಷಣಿಕ ಭಾವನಾತ್ಮಕ ಸಂಬಂಧ’ ಅವಳ ಓದಿನ ಸಮಯವನ್ನು ನುಂಗಿ ಹಾಕಿತು. ಸುಳ್ಳು ಹೇಳುವುದನ್ನು ರೂಢಿಸಿಕೊಂಡ ಅವಳು ಪರೀಕ್ಷೆಯಲ್ಲಿ ಸೋತಾಗ, ಆಕೆಯ ಕುಟುಂಬ ಸಮಾಜದಲ್ಲಿ ತಲೆ ತಗ್ಗಿಸುವಂತಾಯಿತು.

ನೀತಿ ​ಪಾಠ: ಭಾವನೆಗಳು ನದಿಯಂತೆ, ಅದಕ್ಕೆ ಶಿಸ್ತಿನ ದಡವಿಲ್ಲದಿದ್ದರೆ ಅದು ಬದುಕನ್ನೇ ಕೊಚ್ಚಿ ಹಾಕುತ್ತದೆ.

ಸಂಸ್ಥೆಯ ಕಳಕಳಿ:

ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಷ್ಟವಲ್ಲ, ಆದರೆ ಅಶಿಸ್ತಿನ ವಾತಾವರಣದಲ್ಲಿ ಬೆಳೆಯುವ ಬುದ್ಧಿವಂತಿಕೆ ಸಮಾಜಕ್ಕೆ ‘ ವಿಷಕಾರಿ’. ಇಂದು ಶಿಸ್ತು ಮತ್ತು ನೈತಿಕತೆಯ ಕೊರತೆಯಿಂದಾಗಿ ಎಷ್ಟೋ ಯುವಕ-ಯುವತಿಯರು ತಮ್ಮ ಗುರಿಯನ್ನು ಮರೆತು ದಡ ಸೇರಲಾಗದೆ ಒದ್ದಾಡುತ್ತಿದ್ದಾರೆ. ಓದುವ ವಯಸ್ಸಿನಲ್ಲಿ ಹಾದಿ ತಪ್ಪಿದರೆ, ಆ ಅಮೂಲ್ಯ ಸಮಯ ಮತ್ತೆ ಮರಳಿ ಬಾರದು.

ಪೋಷಕರ ಜವಾಬ್ದಾರಿ:

ಮಕ್ಕಳು ಕೇವಲ ದೊಡ್ಡ ಹುದ್ದೆಗೇರಿದರೆ ಸಾಲದು, ಅವರು ಸಂಸ್ಕಾರವಂತರಾಗಿ ಬೆಳೆಯಬೇಕು. ಸಮಾಜದ ಕೆಟ್ಟ ಆಕರ್ಷಣೆಗಳಿಂದ ಮಕ್ಕಳನ್ನು ರಕ್ಷಿಸಿ, ಅವರನ್ನು ನೈತಿಕ ಹಾದಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ನೀವು ನೀಡುವ ಸೌಲಭ್ಯಗಳು ಅವರಿಗೆ ಅಸ್ತ್ರವಾಗಬೇಕೇ ಹೊರತು ಹಾದಿ ತಪ್ಪಿಸುವ ಶಸ್ತ್ರವಾಗಬಾರದು.

ನಮ್ಮ ನಿಲುವು:

ಪ್ರತಿಷ್ಠಾನ ಐಎಎಸ್ ಅಕಾಡೆಮಿಯು ಕೇವಲ ಜ್ಞಾನವನ್ನು ಹಂಚುವ ಸಂಸ್ಥೆಯಲ್ಲ; ಇದು ಅಶಿಸ್ತಿನ ಕತ್ತಲೆಯನ್ನು ಸರಿಸಿ, ಯುವಜನತೆಯಲ್ಲಿ ಜವಾಬ್ದಾರಿಯ ಬೆಳಕನ್ನು ಹರಿಸುವ ಶಕ್ತಿ. ಇಲ್ಲಿ ಶಿಸ್ತು ಕಡ್ಡಾಯ, ಸಂಸ್ಕಾರವೇ ಮೂಲಮಂತ್ರ. ದಾರಿ ತಪ್ಪುತ್ತಿರುವ ಯುವಶಕ್ತಿಯನ್ನು ಸರಿಯಾದ ಹಾದಿಗೆ ತಂದು, ಅವರನ್ನು ದೇಶದ ಶಕ್ತಿಯನ್ನಾಗಿ ರೂಪಿಸುವುದೇ ನಮ್ಮ ನಿಜವಾದ ಉದ್ದೇಶ.

ನೆನಪಿಡಿ: ತಪ್ಪು ಮಾಡುವುದು ಮಾನವ ಸಹಜ ಗುಣ, ಆದರೆ ಆ ತಪ್ಪನ್ನು ತಿದ್ದಿ ಸರಿಯಾದ ಹಾದಿಗೆ ತರುವುದು

‘ಪ್ರತಿಷ್ಠಾನದ ಸಂಸ್ಕಾರ’.

ಬನ್ನಿ, ಉಜ್ವಲ ಭವಿಷ್ಯಕ್ಕಾಗಿ ಇಂದೇ ಶಿಸ್ತಿನ ನೈತಿಕ ಪಥವನ್ನಾಯ್ದುಕೊಳ್ಳಿ.

ಅಧ್ಯಾಯ 3

ಅಧಿಕಾರ ಮತ್ತು ಅವಕಾಶ - ಸಮಾಜ ಬದಲಿಸುವ ಶಕ್ತಿ

ಶೀರ್ಷಿಕೆ: ಒಬ್ಬ ಜಿಲ್ಲಾಧಿಕಾರಿಯ (DC) ಸಹಿಗಿರುವ ತಾಕತ್ತು ನಿಮಗೊತ್ತೇ?

ಒಬ್ಬ ಐಎಎಸ್ (IAS) ಅಥವಾ ಐಪಿಎಸ್ (IPS) ಅಧಿಕಾರಿಯಾಗುವುದು ಎಂದರೆ ಅದು ಕೇವಲ ಒಂದು ಸರ್ಕಾರಿ ಉದ್ಯೋಗವಲ್ಲ; ಅದು ಸಮಾಜದ ಚಿತ್ರಣವನ್ನೇ ಬದಲಿಸಬಲ್ಲ ಅತ್ಯುನ್ನತ ಜವಾಬ್ದಾರಿ. ಈ ಹುದ್ದೆಯು ನೀಡುವ ಗೌರವ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಇರುವ ಅವಕಾಶಗಳು ಅಪ್ರತಿಮವಾದವು.

1. ನಿರ್ಧಾರ ತೆಗೆದುಕೊಳ್ಳುವ ಸಾರ್ವಭೌಮ ಶಕ್ತಿ:

ಒಬ್ಬ ಅಧಿಕಾರಿಯಾಗಿ ನೀವು ತೆಗೆದುಕೊಳ್ಳುವ ಒಂದು ಸಣ್ಣ ನಿರ್ಧಾರ ಅಥವಾ ಹಾಕುವ ಒಂದು ಸಹಿ ಸಾವಿರಾರು ಜನರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲದು. ಒಂದು ಶಾಲೆಯ ಸುಧಾರಣೆ, ಬಡವರಿಗೆ ಸಕಾಲಕ್ಕೆ ಸಿಗುವ ನ್ಯಾಯ ಅಥವಾ ಒಂದು ಹಳ್ಳಿಯ ಸರ್ವಾಂಗೀಣ ಅಭಿವೃದ್ಧಿ ನಿಮ್ಮ ಕಾರ್ಯಕ್ಷಮತೆಯ ಮೇಲೆ ನಿರ್ಧಾರವಾಗುತ್ತದೆ.

2. ರಾಜಾತಿಥ್ಯ ಮತ್ತು ಸೌಲಭ್ಯಗಳು:

ಭಾರತ ಸರ್ಕಾರವು ತನ್ನ ಅತ್ಯುನ್ನತ ಅಧಿಕಾರಿಗಳಿಗೆ ಅತ್ಯಂತ ಗೌರವಯುತವಾದ ಜೀವನಶೈಲಿಯನ್ನು ನೀಡುತ್ತದೆ:

  • ಅಧಿಕೃತ ನಿವಾಸ:  ಸುಸಜ್ಜಿತವಾದ ಬಂಗಲೆ ಮತ್ತು ಸುಂದರವಾದ ಕಚೇರಿ.
  • ಭದ್ರತೆ ಮತ್ತು ವಾಹನ : ಸರ್ಕಾರಿ ವಾಹನ ಮತ್ತು ರಕ್ಷಣೆಗಾಗಿ ಅಂಗರಕ್ಷಕರು.
  • ಗೌರವಧನ : ಅತ್ಯುತ್ತಮ ವೇತನ ಶ್ರೇಣಿಯ ಜೊತೆಗೆ ನಿವೃತ್ತಿಯ ನಂತರವೂ ಸಿಗುವ ಭದ್ರತೆ.
  • ಜಾಗತಿಕ ಅವಕಾಶ: ದೇಶ-ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸರ್ಕಾರವೇ ಸಂಪೂರ್ಣ ಪ್ರೋತ್ಸಾಹ ನೀಡುತ್ತದೆ.

3. ಸಾಮಾಜಿಕ ಗೌರವದ ಶಿಖರ:

ನೀವು ಹೋದಲ್ಲೆಲ್ಲಾ ಜನರು ನಿಮ್ಮನ್ನು ಗೌರವದಿಂದ ಕಾಣುತ್ತಾರೆ. ನಿಮ್ಮ ಮಾತಿಗೂ ಮತ್ತು ವ್ಯಕ್ತಿತ್ವಕ್ಕೂ ಸಮಾಜದಲ್ಲಿ ಅತ್ಯುನ್ನತ ಸ್ಥಾನವಿರುತ್ತದೆ. ನಿಮ್ಮ ತಂದೆ-ತಾಯಿಯರಿಗೆ ನೀವು ನೀಡಬಹುದಾದ ಅತಿದೊಡ್ಡ ಉಡುಗೊರೆ ಎಂದರೆ ಅದು ಈ ಅಧಿಕಾರಿ ಎನ್ನುವ ಘನತೆ.

ವಿಶೇಷ ಗಮನ: ಇಷ್ಟೊಂದು ಸೌಲಭ್ಯಗಳು ಏತಕ್ಕಾಗಿ?

ಅನೇಕರಿಗೆ ಒಂದು ಪ್ರಶ್ನೆ ಕಾಡಬಹುದುಒಬ್ಬ ಅಧಿಕಾರಿಗೆ ಸರ್ಕಾರ ಇಷ್ಟೊಂದು ಸೌಲಭ್ಯಗಳನ್ನು ಏಕೆ ನೀಡುತ್ತದೆ? ಇದರ ಹಿಂದೆ ಐದು ಪ್ರಮುಖ ಕಾರಣಗಳಿವೆ:

ನಿರ್ಭೀತ ಕಾರ್ಯನಿರ್ವಹಣೆ:

ಅಧಿಕಾರಿಯು ಯಾವುದೇ ಆರ್ಥಿಕ ಆಮಿಷಕ್ಕೆ ಅಥವಾ ಭ್ರಷ್ಟಾಚಾರಕ್ಕೆ ಒಳಗಾಗದೆ, ತಲೆ ಎತ್ತಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿ ಎಂಬುದು ಸರ್ಕಾರದ ಆಶಯ. ಆರ್ಥಿಕ ಸ್ವಾತಂತ್ರ್ಯವಿದ್ದರೆ ಮಾತ್ರ ನೈತಿಕ ಆಡಳಿತ ಸಾಧ್ಯ.

24/7 ಸನ್ನದ್ಧತೆ:

ಜಿಲ್ಲಾಧಿಕಾರಿಯ ಕೆಲಸ ಸಮಯಕ್ಕೆ ಸೀಮಿತವಾದುದಲ್ಲ. ಪ್ರವಾಹ, ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಅವರು ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಹಾಜರಿರಬೇಕು. ಅದಕ್ಕಾಗಿಯೇ ಸದಾ ಸನ್ನದ್ಧವಾಗಿರುವ ವಾಹನ ಮತ್ತು ಸಿಬ್ಬಂದಿ ನೀಡಲಾಗುತ್ತದೆ.

ಒತ್ತಡ ನಿರ್ವಹಣೆ :

ಇಡೀ ಜಿಲ್ಲೆಯ ಜವಾಬ್ದಾರಿ ಹೊರಬೇಕಾದ ಅಧಿಕಾರಿ ವೈಯಕ್ತಿಕ ಮನೆಗೆಲಸ ಅಥವಾ ಭದ್ರತೆಯ ಬಗ್ಗೆ ಚಿಂತಿಸದೆ, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂದು ಈ ಸೌಕರ್ಯಗಳನ್ನು ನೀಡಲಾಗುತ್ತದೆ.

ಸಂರಕ್ಷಣೆ:

ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎದುರಾಗುವ ಶಕ್ತಿಶಾಲಿ ವ್ಯಕ್ತಿಗಳ ವಿರೋಧದಿಂದ ಅಧಿಕಾರಿಯನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವುದು ಸರ್ಕಾರದ ಹೊಣೆ.

ಸರ್ಕಾರದ ಘನತೆ :

ಜಿಲ್ಲಾಧಿಕಾರಿ ಕೇವಲ ವ್ಯಕ್ತಿಯಲ್ಲ, ಅವರು ಜಿಲ್ಲೆಯಲ್ಲಿ ಸರ್ಕಾರದ ‘ಮುಖ’. ಅವರ ಗೌರವವು ರಾಜ್ಯದ ಘನತೆಯನ್ನು ಬಿಂಬಿಸುತ್ತದೆ.

ಸೌಲಭ್ಯಗಳಿದ್ದರೂ ವ್ಯವಸ್ಥೆ ಏಕೆ ಬದಲಾಗಿಲ್ಲ?

ಇಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಇಷ್ಟೆಲ್ಲಾ ರಾಜಾತಿಥ್ಯ ಮತ್ತು ಸೌಲಭ್ಯಗಳನ್ನು ಒದಗಿಸಿದ್ದರೂ, ಸಾಮಾನ್ಯ ಜನರ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಬಂದಿಲ್ಲ ಎಂಬುದು ಕಟು ಸತ್ಯ. ಇದಕ್ಕೆ ಕಾರಣ—ಅಧಿಕಾರವಿದ್ದರೂ ಮೌಲ್ಯಗಳಿಲ್ಲದ ಮನಸ್ಥಿತಿ. ಇಂದು ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟರು, ಸ್ವಾರ್ಥಿಗಳು ಮತ್ತು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾದ ‘ಕೈಗೊಂಬೆ’ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಇಂದಿನ ಭಾರತಕ್ಕೆ ಕೇವಲ ‘ಬುದ್ಧಿವಂತ’ ಅಧಿಕಾರಿಗಳು ಬೇಕಿಲ್ಲ; ಏಕೆಂದರೆ  ನೈತಿಕತೆ ಇಲ್ಲದ ಬುದ್ಧಿವಂತಿಕೆ  ಸಮಾಜಕ್ಕೆ ಮಾರಕವಾಗುತ್ತದೆ. ಇಂದಿನ ತುರ್ತು ಅಗತ್ಯವೆಂದರೆ ನೈತಿಕತೆ, ಧರ್ಮನಿಷ್ಠೆ, ಹೊಣೆಗಾರಿಕೆ ಮತ್ತು ಜನಸೇವೆಯ ಬದ್ಧತೆ ಇರುವ ಅಧಿಕಾರಿಗಳು. “ಸರ್ಕಾರ ಸೌಲಭ್ಯಗಳನ್ನು ನೀಡುವುದು ಅಧಿಕಾರಿಗಳಿಗೆ ಸೇವೆಯ ಶಕ್ತಿ ತುಂಬಲು — ಜನಸೇವೆಗೆ ಸಮರ್ಪಿತರಾಗಲು.”

 ಈ ಮೌಲ್ಯವನ್ನು ಮರೆತವರ ಸ್ಥಾನದಲ್ಲಿ, ನೈತಿಕತೆ ಮತ್ತು ಜವಾಬ್ದಾರಿಯುತತೆಯೊಂದಿಗೆ ಕಾರ್ಯನಿರ್ವಹಿಸುವ ನಾಯಕರ ಅಗತ್ಯವಿದೆ.

ಪ್ರತಿಷ್ಠಾನದ ಮಹಾಸಂಕಲ್ಪ:

ಈ ಕೊಳಕು ವ್ಯವಸ್ಥೆಯನ್ನು ಬದಲಿಸಲು ನಾವು ಕೇವಲ ತರಬೇತಿ ನೀಡುವುದಿಲ್ಲ, ಬದಲಿಗೆ ಜನಪರ ಆಡಳಿತದ ಹೊಸ ಪೀಳಿಗೆಯನ್ನು ಹುಟ್ಟುಹಾಕಲು ಸಂಕಲ್ಪ ಮಾಡಿದ್ದೇವೆ. ಈ ದೂರದೃಷ್ಟಿಯ ಪರಿಕಲ್ಪನೆಯೇ — ” ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ”.

ಕರ್ನಾಟಕದ ಪ್ರತಿಯೊಂದು ತಾಲ್ಲೂಕಿನಿಂದ ಕೇವಲ ಅಂಕ ಗಳಿಸುವವರನ್ನಲ್ಲ, ಬದಲಿಗೆ ಸಮಾಜದ ಕಷ್ಟಕ್ಕೆ ಮಿಡಿಯುವ ನೈತಿಕ ಶಕ್ತಿಯುಳ್ಳ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ರಾಜ್ಯಾದ್ಯಂತ ಬೃಹತ್ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ.   ನಮ್ಮ ಗುರಿ ಸ್ಪಷ್ಟವಾಗಿದೆ: ಪ್ರತಿ ತಾಲ್ಲೂಕಿಗೊಬ್ಬ ಧೀಮಂತ ಅಧಿಕಾರಿಯನ್ನು ನೀಡಿ, ಆಡಳಿತದ ಸುವರ್ಣ ಯುಗವನ್ನು ಮರಳಿ ತರುವುದು.                                                    

ನಮ್ಮ ಸಂಸ್ಥೆಯ ನಿಲುವು:

ಅಧಿಕಾರವು ಅಹಂಕಾರ ಪ್ರದರ್ಶಿಸಲು ಅಲ್ಲ, ಬದಲಿಗೆ ಬಡವರ ಕಣ್ಣೀರು ಒರೆಸಲು ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ಇರುವ ಒಂದು ‘ಸಮಾಜಮುಖಿ ಅಸ್ತ್ರ’ ಎಂಬುದನ್ನು ನಾವು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಬಿತ್ತುತ್ತೇವೆ.

ಅಧ್ಯಾಯ 4

ಒಂದು ತರಬೇತಿ – ಹತ್ತು ಹಲವು ಹುದ್ದೆಗಳು (Integrated Model)

ಶೀರ್ಷಿಕೆ: ನಮ್ಮ ಗುರಿ ಆಕಾಶದಷ್ಟಿರಲಿ, ಆದರೆ ನಮ್ಮ ಪಾದಗಳು ಭದ್ರವಾಗಿರಲಿ!

“ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಎಂಬುದು ಪ್ರತಿಷ್ಠಾನ ಐಎಎಸ್ ಅಕಾಡೆಮಿಯ ಜನಪರ ಆಡಳಿತದ ಹೊಸ ಪೀಳಿಗೆಯನ್ನು ಹುಟ್ಟು ಹಾಕುವ ದೂರದೃಷ್ಟಿಯ ಸಂಕಲ್ಪ. ಅದಕ್ಕಾಗಿಯೇ ನಾವು ಪ್ರತಿಭಾವಂತ ಹಾಗು ಬದ್ಧತೆ ಮತ್ತು ನೈತಿಕತೆ ಇರುವ ವಿದ್ಯಾರ್ಥಿಗಳನ್ನು    ರಾಜ್ಯಾದ್ಯಂತ ಪ್ರವೇಶ ಪರೀಕ್ಷೆ ಮೂಲಕ  ಆಯ್ಕೆ ಮಾಡಿ ಪ್ರವೇಶಾತಿ ನೀಡುತ್ತಿದ್ದೇವೆ. 

ಆದರೆ ವಾಸ್ತವ ಸತ್ಯ ಏನೆಂದರೆ ಆಯ್ಕೆಯಾದ ಎಲ್ಲಾ ನಮ್ಮ ಅಭ್ಯರ್ಥಿಗಳು  ಪ್ರತಿಭಾವಂತ ರಿದ್ದರೂ  ಒಂದೇ ಪ್ರಯತ್ನದಲ್ಲಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ.   ಪ್ರವೇಶಾತಿ ಪಡೆದ ವಿಧ್ಯಾರ್ಥಿಗಳ ಒಟ್ಟು ಸಂಖ್ಯೆಯ ಪ್ರತಿಶತ ಶೇಕಡ 10 ರಷ್ಟು ಯಶಸ್ಸು ಕಂಡರೂ ಉಳಿದ 90% ಅಭ್ಯರ್ಥಿಗಳು ಯಾವುದಾದರೂ ಒಂದು  ಸರ್ಕಾರಿ ಹುದ್ದೆ ಪಡೆಯಲೇಬೇಕು ಎಂಬುದು      ನಮ್ಮ ಪ್ರತಿಷ್ಠಾನದ ಹಂಬಲ  ಮತ್ತು  ಧ್ಯೇಯ .

ಆದ್ದರಿಂದ ನಾವು ನೀಡುವ  ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ (One Taluk -One IAS) ತರಬೇತಿಯು ಸಮಗ್ರವಾಗಿದ್ದು, ನೀವು ದೇಶದ ಅತ್ಯುನ್ನತ ಪರೀಕ್ಷೆಗಳಿಗೆ ಸಿದ್ಧರಾಗುವುದರ ಜೊತೆಗೆ, ರಾಜ್ಯ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತೀರಿ.

ಇಂಟಿಗ್ರೇಟೆಡ್ ತರಬೇತಿಯ ವ್ಯಾಪ್ತಿ:

ನಮ್ಮ ತರಬೇತಿಯಲ್ಲಿ ಈ ಕೆಳಗಿನ ಎಲ್ಲಾ ಪ್ರಮುಖ ಪರೀಕ್ಷೆಗಳ ಪಠ್ಯಕ್ರಮವನ್ನು ವೈಜ್ಞಾನಿಕವಾಗಿ ಸಂಯೋಜಿಸಲಾಗಿದೆ:

  • ರಾಷ್ಟ್ರ ಮಟ್ಟದ ಪರೀಕ್ಷೆಗಳು: UPSC (IAS, IPS, IRS)
  • ರಾಜ್ಯ ಮಟ್ಟದ Gazetted ಹುದ್ದೆಗಳು: KAS (AC, DYSP, Tahsildar)
  • ಪೊಲೀಸ್ ಇಲಾಖೆ: PSI, PC
  • ಇತರೆ ಪ್ರಮುಖ ಹುದ್ದೆಗಳು: FDA, SDA, Group-C, PDO, VAO ಇತ್ಯಾದಿ

ಯಾಕೆ ಈ ಮಾದರಿ ನಮಗೆ ಮುಖ್ಯ?

1. ವ್ಯಾಪಕ ಜ್ಞಾನದ ಲಾಭ:

UPSC ಮಟ್ಟದ ಉನ್ನತ ತರಬೇತಿ ಪಡೆದಾಗ, ರಾಜ್ಯ ಮಟ್ಟದ KAS ಅಥವಾ PSI ಪರೀಕ್ಷೆಗಳು ನಿಮಗೆ ಅತ್ಯಂತ ಸುಲಭವಾಗುತ್ತವೆ. ನಿಮ್ಮ ಜ್ಞಾನ ವ್ಯಾಪ್ತಿ ಸ್ವಾಭಾವಿಕವಾಗಿ ವಿಸ್ತರಿಸುತ್ತದೆ.

2. ಸಮಯ ಮತ್ತು ಶ್ರಮದ ಉಳಿತಾಯ:

ಒಂದೇ ತರಬೇತಿಯಲ್ಲಿ ನೀವು ಹಲವಾರು ಪರೀಕ್ಷೆಗಳಿಗೆ ಸಿದ್ಧರಾಗುತ್ತೀರಿ. ಇದರಿಂದ ನೀವು ಒಂದು ಹುದ್ದೆಯ ಮೇಲೆ ಮಾತ್ರ ಅವಲಂಬಿತರಾಗದೆ, ಹಲವು ಅವಕಾಶಗಳನ್ನು ಪಡೆಯುತ್ತೀರಿ. ಬೇರೆ ಬೇರೆ ಕೋರ್ಸ್ ಗಳಿಗೆ ಪ್ರತ್ಯೇಕ ತರಬೇತಿ ಶುಲ್ಕವನ್ನು ಪಾವತಿಸುವ ಅಗತ್ಯ ಇರುವುದಿಲ್ಲ.. ಪಾವತಿಸುವ ಒಂದೇ ಶುಲ್ಕದ ಮೊತ್ತದಲ್ಲಿ  ಎಲ್ಲಾ ಪರೀಕ್ಷೆಗಳಿಗೂ ತರಬೇತಿ ನೀಡುವ ‘ಒಂದು ತರಬೇತಿ ಹಲವು ಹುದ್ದೆಗಳು’ ಮಾದರಿಯನ್ನು ವಿನ್ಯಾಸ ಮಾಡಲಾಗಿದೆ.

3. ಪ್ಲಾನ್ B ,ಉದ್ಯೋಗದ ಭರವಸೆ.

ಐಎಎಸ್ ಅಥವಾ ಐಪಿಎಸ್ ಆಗುವುದು ನಮ್ಮ ಪರಮ ಗುರಿ. ಆದರೆ ಒಂದು ವೇಳೆ ಅಲ್ಪ ಅಂತರದಲ್ಲಿ ಆ ಗುರಿ ತಲುಪದಿದ್ದರೂ, ನಿಮ್ಮಲ್ಲಿರುವ ಜ್ಞಾನ ಮತ್ತು ತಯಾರಿಯಿಂದ ನೀವು ಕನಿಷ್ಠ ಒಂದು ಗೌರವಯುತ ಸರ್ಕಾರಿ ಹುದ್ದೆಯನ್ನು (SDA/FDA/PDO) ಖಚಿತವಾಗಿ ಪಡೆಯುವ ಮಟ್ಟಕ್ಕೆ ತಲುಪುತ್ತೀರಿ.

4. ಆತ್ಮವಿಶ್ವಾಸದ ನಿರ್ಮಾಣ:

ಒಂದೇ ಗುರಿಗೆ ಸೀಮಿತವಾಗದೆ, ಹಲವು ಅವಕಾಶಗಳಿಗಾಗಿ ಸಿದ್ಧರಾಗುವಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು “ನಾನು ಸಾಧಿಸಬಲ್ಲೆ” ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತೀರಿ.

ಸಂಸ್ಥೆಯ ಭರವಸೆ:

“ನಾವು ಕೇವಲ ಆಕಾಶದ ನಕ್ಷತ್ರಗಳನ್ನು ತೋರಿಸುವುದಿಲ್ಲ;

ಆ ನಕ್ಷತ್ರಗಳನ್ನು ಮುಟ್ಟಲು ಬೇಕಾದ ಭದ್ರವಾದ ಏಣಿಯನ್ನು ನಿರ್ಮಿಸಿಕೊಡುತ್ತೇವೆ.”. ನಮ್ಮ ಧ್ಯೇಯ ನಮ್ಮ ” ಪ್ರತಿ ಸ್ಪರ್ದಾರ್ಥಿಗೊಂದು ಸರ್ಕಾರಿ ಉದ್ಯೋಗ “.

ಅಧ್ಯಾಯ 5

NextGen ಫೌಂಡೇಶನ್ - ಭವಿಷ್ಯದ ಬುನಾದಿ

ಶೀರ್ಷಿಕೆ: ಬದಲಾಗುತ್ತಿರುವ ಕಾಲದ ಕರೆ: ಪದವಿಯ ನಂತರ ಸಿದ್ಧತೆ ಹಳೆಯ ಕಾಲ; ಪದವಿಯ ಜೊತೆಗೇ ಅಧಿಕಾರಿಯಾಗುವುದು ಹೊಸ ಕಾಲ!

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕೇವಲ ಪದವೀಧರರಿಗೆ ಮಾತ್ರ ಸೀಮಿತವಲ್ಲ. ಸಮಯದ ಸರಿಯಾದ ಸದುಪಯೋಗ ಮತ್ತು ಅತಿ ಚಿಕ್ಕ ವಯಸ್ಸಿನಲ್ಲೇ ಐಎಎಸ್/ಕೆಎಎಸ್ ಗುರಿ ತಲುಪುವ ಕನಸು ಹೊಂದಿರುವವರಿಗಾಗಿ ಪ್ರತಿಷ್ಠಾನ ಐಎಎಸ್ ಅಕಾಡೆಮಿಯು ಎರಡು ವಿಶೇಷ ಆನ್‌ಲೈನ್ ಕಾರ್ಯಕ್ರಮಗಳನ್ನು ರೂಪಿಸಿದೆ.

1. NextGen Civil Service: Online Advance Foundation Course

ಯಾರಿಗಾಗಿ?: ಪಿಯುಸಿ (PUC) ಮತ್ತು  ಪದವಿ ವಿದ್ಯಾರ್ಥಿಗಳಿಗಾಗಿ.

ವಾಸ್ತವ ಸತ್ಯ: ಬಹುತೇಕ ವಿದ್ಯಾರ್ಥಿಗಳು ಡಿಗ್ರಿ ಪರೀಕ್ಷೆಗಳಿಗೆ ಸಿದ್ಧತೆ ಮಾಡುವುದು ಪರೀಕ್ಷೆಯ ಒಂದೆರಡು ದಿನಗಳ ಮೊದಲು ಮಾತ್ರ. ಆದುದರಿಂದ 3-4 ವರ್ಷಗಳ ಅಮೂಲ್ಯ ಡಿಗ್ರಿ ವ್ಯಾಸಂಗದ ಸಮಯವನ್ನು ವ್ಯರ್ಥ ಮಾಡುವ ಬದಲು, ದಿನಕ್ಕೆ ಕೇವಲ 2-3 ಗಂಟೆ ಸಮಯವನ್ನು ನಮ್ಮ Online Advance Foundation ಗೆ ನೀಡಿದರೆ  :     

ಅನುಕೂಲಗಳು   

  • ಡಿಗ್ರಿ ವ್ಯಾಸಂಗದ ಅವಧಿಯಲ್ಲೇ ಪೊಲೀಸ್, VAO, SDA, ಬ್ಯಾಂಕಿಂಗ್ ಮುಂತಾದ ಹುದ್ದೆಗಳನ್ನು ಪಡೆಯಬಹುದು.
  • ಪದವಿ ಮುಗಿಯುವ ವೇಳೆಗೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿರುತ್ತೀರಿ.

ಇಲ್ಲವಾದಲ್ಲಿ, ಡಿಗ್ರಿ ಮುಗಿಸಿ ಉದ್ಯೋಗ ಹುಡುಕುವ ವಯಸ್ಸಿನಲ್ಲಿ ಮತ್ತೆ ಶೂನ್ಯದಿಂದ ಸಿದ್ಧತೆ ಆರಂಭಿಸಬೇಕಾಗುತ್ತದೆ, ಇದು ಸಮಯ ಮತ್ತು ಹಣ ಎರಡರ ವ್ಯರ್ಥವಾಗಲಿದೆ. “ನಿಮ್ಮ ಪದವಿ ಕೇವಲ ಒಂದು ಸರ್ಟಿಫಿಕೇಟ್ ಆಗದಿರಲಿ, ಅದು ನಿಮ್ಮ ಯಶಸ್ಸಿನ ಮೆಟ್ಟಿಲಾಗಲಿ.”

2. NextGen Civil Service School Foundation

ಯಾರಿಗಾಗಿ?: 6 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗಾಗಿ.

ಉದ್ದೇಶ: ಮಗುವಿನ ಶಾಲಾ ಪಠ್ಯಕ್ರಮದ (Syllabus) ಆಧಾರದ ಮೇಲೆಯೇ ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಕೋನ ಬೆಳೆಸುವುದು.

ಅನುಕೂಲಗಳು:ಇಂದು ಯುಪಿಎಸ್ಸಿ/ಕೆಪಿಎಸ್ಸಿ ಕೋಚಿಂಗ್ ಪಡೆಯುವ ಪ್ರತಿಯೊಬ್ಬರೂ ಓದುವುದು 6 ರಿಂದ 12ನೇ ತರಗತಿಯ NCERT/DSERT ಪುಸ್ತಕಗಳನ್ನೇ! ಶಾಲೆ  ಮತ್ತು ಡಿಗ್ರಿ ಮುಗಿದ ಮೇಲೆ ಮತ್ತೆ ಅದೇ ಪುಸ್ತಕಗಳನ್ನು ನಿಮ್ಮ ಮಕ್ಕಳು ಓದುವ ಬದಲು, ಶಾಲೆಯಲ್ಲಿರುವಾಗಲೇ ಆ ಪಠ್ಯವನ್ನು ‘ಸ್ಪರ್ಧಾತ್ಮಕ ಪರೀಕ್ಷೆ’ಯ ದೃಷ್ಟಿಯಲ್ಲಿ ಕಲಿತರೆ —

  • ಮಕ್ಕಳು ಶಾಲಾ ಪರೀಕ್ಷೆಗಳಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುತ್ತಾರೆ.
  • ಬಾಲ್ಯದಲ್ಲೇ ತಾರ್ಕಿಕ ಆಲೋಚನೆ ಮತ್ತು ನಾಯಕತ್ವದ ಗುಣಗಳು ಮೈಗೂಡುತ್ತವೆ.
  • ಭವಿಷ್ಯದ ಅಧಿಕಾರಿಯಾಗುವ ಕನಸಿಗೆ  ಇಂದೇ ಬುನಾದಿ ಹಾಕಲಾಗುತ್ತದೆ.

ಒಬ್ಬ ಅಧಿಕಾರಿಯಾಗಲು ತಡವಾಗಿ ಹಾದಿ ತುಳಿಯುವ ಬದಲು, ಬಾಲ್ಯದಿಂದಲೇ ಭದ್ರವಾದ ಬುನಾದಿ ಹಾಕಿಕೊಳ್ಳುವುದು ಜಾಣತನದ ಲಕ್ಷಣ.

ಗಮನಿಸಬೇಕಾದ ಕಹಿ ಸತ್ಯಗಳು (The Bitter Realities):

1. ಮೊಬೈಲ್ - ನಿಮ್ಮ ಮಗುವಿನ ಭವಿಷ್ಯ ನುಂಗುವ 'ರಾಕ್ಷಸ'ನಲ್ಲ, ಯಶಸ್ಸಿನ 'ಡಿಜಿಟಲ್ ಗುರು'!

ಇಂದಿನ ದಿನಗಳಲ್ಲಿ ಮೊಬೈಲ್ ಇಲ್ಲದ ವಿದ್ಯಾರ್ಥಿಯನ್ನು ಹುಡುಕುವುದು ಅಸಾಧ್ಯ. ಆದರೆ, ಬಹುತೇಕ ವಿದ್ಯಾರ್ಥಿಗಳು ಗೇಮ್‌ಗಳು, ಚಾಟಿಂಗ್ ಮತ್ತು ರೀಲ್ಸ್‌ಗಳಂತಹ ಮೋಜುಗಳಲ್ಲಿ (Addiction) ಮುಳುಗಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬುದು ಕಹಿ ಸತ್ಯ.

ಪೋಷಕರೇ, ನೀವು ಮೊಬೈಲ್ ಅನ್ನು ಮಕ್ಕಳಿಂದ ಕಿತ್ತುಕೊಳ್ಳಲು ಹೋದರೆ ಅದು ಅವರಲ್ಲಿ ಹಠ ಮತ್ತು ವಿರೋಧವನ್ನು ಹುಟ್ಟಿಸಬಹುದು.ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅನ್ನು ನಿಷೇಧಿಸುವುದು ಪರಿಹಾರವಲ್ಲ; ಬದಲಿಗೆ ಮೊಬೈಲ್ ಅನ್ನೇ ‘ಡಿಜಿಟಲ್ ಗುರು’ ವಾಗಿ ಪರಿವರ್ತಿಸುವುದು ಇಂದಿನ ಅನಿವಾರ್ಯತೆ.  

ಈ ನಿಟ್ಟಿನಲ್ಲಿ ಪ್ರತಿಷ್ಠಾನ ಐಎಎಸ್ ಅಕಾಡೆಮಿಯು ಮಕ್ಕಳಲ್ಲಿ ‘ಡಿಜಿಟಲ್ ಶಿಸ್ತನ್ನು’ ಮೂಡಿಸುವ ಮೂಲಕ ಅವರ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಅನ್ನು    ‘ಸ್ಮಾರ್ಟ್ ಕ್ಲಾಸ್‌ರೂಮ್ ‘ಅಥವಾ  ‘ಪಾಕೆಟ್ ಕ್ಲಾಸ್‌ರೂಮ್.’    ಆಗಿ  online ತರಬೇತಿ ಮೂಲಕ ಪರಿವರ್ತನೆ ಮಾಡಲಿದೆ .ಮೊಬೈಲ್ ಮೂಲಕವೇ ಲೈವ್ ತರಗತಿಗಳು, ರೆಕಾರ್ಡ್ ತರಗತಿಗಳು,ಯೋಗ ಮತ್ತು ಧ್ಯಾನದ ಮಾರ್ಗದರ್ಶನ ನೀಡಿ, ವ್ಯರ್ಥವಾಗುವ ಸಮಯವನ್ನು ಜ್ಞಾನಾರ್ಜನೆ’ಗೆ  ಪ್ರತಿಷ್ಠಾನವು   ಪರಿವರ್ತಿಸಲಿದೆ.

2. ಉತ್ತರ ಭಾರತದ ವಿಧ್ಯಾರ್ಥಿಗಳ ಯಶಸ್ಸಿನ ರಹಸ್ಯ :

ಉತ್ತರ ಭಾರತದ ಹಳ್ಳಿಗಳ ಪ್ರತಿಭೆಗಳು 21-22ನೇ ವಯಸ್ಸಿಗೆ ಐಎಎಸ್/ಐಪಿಎಸ್ ಕುರ್ಚಿಯಲ್ಲಿ ಕುಳಿತು ದೇಶವನ್ನಾಳುತ್ತಿದ್ದಾರೆ. ಅವರಲ್ಲಿರುವ ರಹಸ್ಯವೇ ‘ಬಾಲ್ಯದ ಸಿದ್ಧತೆ’. ನಮ್ಮ ಮಕ್ಕಳು ಪದವಿ ಮುಗಿಸಿ ‘ಮುಂದೇನು?’ ಎಂದು ಯೋಚಿಸುವ ಹೊತ್ತಿಗೆ, ಅವರು ತರಬೇತಿ ಮುಗಿಸಿ ಅಧಿಕಾರ ಸ್ವೀಕರಿಸಿರುತ್ತಾರೆ.  ನಮ್ಮ ಕರ್ನಾಟಕದ ಮಕ್ಕಳು ಯಾಕೆ ಆಗಬಾರದು? ಈ ಪ್ರಶ್ನೆಗೆ ಉತ್ತರವೇ ನಮ್ಮ “NextGen ಫೌಂಡೇಶನ್.”

ನಿಮ್ಮ ಮಗುವಿನೊಂದಿಗೆ ಇಂದೇ 10 ನಿಮಿಷ ಕುಳಿತು ಅವರ ಕನಸಿನ ಬಗ್ಗೆ ಮಾತನಾಡಿ. ಆ ಕನಸಿಗೆ ನೀರೆರೆಯಲು ನಾವು ಸಿದ್ಧರಿದ್ದೇವೆ.”

ಅಕಾಡೆಮಿಯ ಕನ್ಸಲ್ಟೇಶನ್ ರವರನ್ನು ಕೂದಲೇ ಭೇಟಿ ಮಾಡುವುದು ಉತ್ತಮ.

ಅಧ್ಯಾಯ 6

ಪ್ರತಿಷ್ಠಾನ ನೈತಿಕ ಪಥ

ಪ್ರತಿಷ್ಠಾನದ ಗುರುಕುಲ ಶಿಸ್ತು . ಇಲ್ಲಿ ಚಾರಿತ್ರ್ಯವೇ ಪವಿತ್ರ. ನಮಗೆ ಕೇವಲ ಅಧಿಕಾರಿಗಳು ಬೇಡ, ಸಂಸ್ಕಾರವಂತ ನಾಯಕರು ಬೇಕು.

ಪ್ರತಿಷ್ಠಾನ ಐಎಎಸ್ ಅಕಾಡೆಮಿಯು ಕೇವಲ ತರಬೇತಿ ಕೇಂದ್ರವಲ್ಲ, ಇದೊಂದು ಆಧುನಿಕ ಗುರುಕುಲ. ಇಲ್ಲಿ ಬರಿ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಒಬ್ಬ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಲಾಗುತ್ತದೆ. ನಮ್ಮ ಸಂಸ್ಥೆಯ ಯಶಸ್ಸಿನ ಗುಟ್ಟು ಈ ಕೆಳಗಿನ ಪಂಚಸೂತ್ರಗಳಲ್ಲಿ ಅಡಗಿದೆ:

1.ಯೋಗ ಹಾಗೂ ಧ್ಯಾನ.

ಪ್ರತಿದಿನ ಬೆಳಿಗ್ಗೆ ಯೋಗ ಮತ್ತು ಧ್ಯಾನ ಕಡ್ಡಾಯ. ಕೇವಲ ತೀಕ್ಷ್ಣವಾದ ಬುದ್ಧಿಯಷ್ಟೇ ಸಾಲದು, ಸವಾಲುಗಳನ್ನು ಎದುರಿಸಲು ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ಆರೋಗ್ಯ ಅತ್ಯಗತ್ಯ. “ಮಾನಸಿಕ ಸ್ಥಿರತೆ ಇಲ್ಲದವನು ಜನಪರ ಆಡಳಿತ ನೀಡಲು ಅಸಾಧ್ಯ” ಎಂಬುದು ನಮ್ಮ ಅಚಲ ನಂಬಿಕೆ. ಇದು ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ.

2. ಭಾಷಾ ಸಂಸ್ಕಾರ (ಬಹುವಚನ ಬಳಕೆ):

ಸಮಾಜದಲ್ಲಿ ಗೌರವ ಪಡೆಯಬೇಕಾದವನು ಮೊದಲು ಇತರರಿಗೆ ಗೌರವ ನೀಡಲು ಕಲಿಯಬೇಕು. ಅಕಾಡೆಮಿಯ ಆವರಣದೊಳಗೆ ಅಭ್ಯರ್ಥಿಗಳು ಪರಸ್ಪರ ಗೌರವದಿಂದ (ಬಹುವಚನದಲ್ಲಿ) ಮಾತನಾಡಬೇಕು. ಇಲ್ಲಿ ಏಕವಚನ ಬಳಕೆಗೆ ಸ್ಥಾನವಿಲ್ಲ. ‘ಮಾತು ಮುತ್ತಿನಂತಿರಲಿ’ ಎಂಬುದು ನಮ್ಮ ಶಿಸ್ತಿನ ಮೊದಲ ಪಾಠ. ಈ ಅಭ್ಯಾಸವು ಸಂದರ್ಶನದ ಸಮಯದಲ್ಲಿ  ಅಭ್ಯರ್ಥಿಯ ವಿನಯವಂತಿಕೆಯನ್ನು ಎತ್ತಿ ತೋರಿಸುತ್ತದೆ.

3.ಸಮಯದ ಪಾಲನೆ.

ಒಬ್ಬ ಅಧಿಕಾರಿಗೆ ಸಮಯದ ಪ್ರಜ್ಞೆಯೇ ಉಸಿರು. ತರಗತಿಗಳಿಗೆ ನಿಗದಿತ ಸಮಯಕ್ಕೆ ಹಾಜರಾಗುವುದು ಶಿಸ್ತಿನ ಅವಿಭಾಜ್ಯ ಅಂಗ. ಕಾಲಹರಣ ಮಾಡುವವರಿಗೆ ಅಥವಾ ಆಲಸಿಗಳಿಗೆ ನಮ್ಮ ಸಂಸ್ಥೆಯಲ್ಲಿ ಮನ್ನಣೆಯಿಲ್ಲ. ಇಲ್ಲಿ ಕಲಿತ ಸಮಯ ಪ್ರಜ್ಞೆ ಪರೀಕ್ಷೆಯ ಮೂರು ಗಂಟೆಗಳನ್ನು ಹೇಗೆ ಸ್ಮಾರ್ಟ್ ಆಗಿ ಬಳಸಬೇಕು ಎಂಬುದಕ್ಕೆ ತರಬೇತಿಯಾಗುತ್ತದೆ.

4.ತಾಂತ್ರಿಕ ಶಿಸ್ತು.

ತರಗತಿಯ ಅವಧಿಯಲ್ಲಿ ಮೊಬೈಲ್ ಫೋನ್‌ಗಳ ಅನಗತ್ಯ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ಜ್ಞಾನಾರ್ಜನೆಗೆ ಭಂಗ ತರುವ ಯಾವುದೇ ಕ್ಷಣಿಕ ಆಕರ್ಷಣೆಗಳಿಗೆ ಇಲ್ಲಿ ಅವಕಾಶವಿಲ್ಲ. ನಾವು ಮೊಬೈಲ್ ಅನ್ನು ‘ಜ್ಞಾನದ ಸಾಧನ’ವಾಗಿ ಬಳಸಲು ಕಲಿಸುತ್ತೇವೆಯೇ ಹೊರತು ‘ಸಮಯದ ಹಂತಕ’ನನ್ನಾಗಿ ಅಲ್ಲ.

5.ನೈತಿಕ ನಡವಳಿಕೆ ಮತ್ತು ಚಾರಿತ್ರ್ಯ.

ಅಕಾಡೆಮಿಯ ಒಳಗೆ ಮತ್ತು ಹೊರಗೆ ಅಭ್ಯರ್ಥಿಯ ನಡವಳಿಕೆಯನ್ನು ನಿರಂತರವಾಗಿ ಗಮನಿಸಲಾಗುತ್ತದೆ. ಚಾರಿತ್ರ್ಯವೇ ನಮ್ಮ ಅಕಾಡೆಮಿಯ ಪವಿತ್ರ ಮಂತ್ರ. ಸಣ್ಣ ಅಶಿಸ್ತು ತೋರಿದರೂ ಅಥವಾ ಸಂಸ್ಥೆಯ ಮೌಲ್ಯಗಳಿಗೆ ಧಕ್ಕೆ ತಂದರೂ ಅಂತಹವರನ್ನು ಮುಲಾಜಿಲ್ಲದೆ ಹೊರಹಾಕಲಾಗುತ್ತದೆ. ನಮಗೆ ಸಂಖ್ಯೆಗಿಂತ  ಗುಣಮಟ್ಟ  ಮುಖ್ಯ.

ಪೋಷಕರಿಗೊಂದು ವಿಶೇಷ ಭರವಸೆ:

​”ಪೋಷಕರೇ, ನಿಮ್ಮ ಮಗು ನಮ್ಮ ಅಕಾಡೆಮಿಗೆ ಸೇರಿದ ಮೇಲೆ ಅವರು ಕೇವಲ ಒಬ್ಬ ವಿದ್ಯಾರ್ಥಿಯಲ್ಲ; ಅವರು ನಮ್ಮ ಕುಟುಂಬದ ಸದಸ್ಯರು. ಅವರು ಮನೆಯಿಂದ ದೂರವಿದ್ದರೂ, ದಾರಿತಪ್ಪದಂತೆ ಮತ್ತು ಉನ್ನತ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ನೋಡಿಕೊಳ್ಳುವ ನೈತಿಕ ಜವಾಬ್ದಾರಿ ನಮ್ಮದು. ಅದಕ್ಕಾಗಿ ನಾವು ನೇರ ಪ್ರವೇಶ ನೀಡುವುದಿಲ್ಲ ಬದಲಿಗೆ ನೈತಿಕ ಪ್ರವೇಶ  ಪರೀಕ್ಷೆ  ಮೂಲಕ   ಅರ್ಹತೆ ಮತ್ತು ಕಲಿಯುವ ಹಂಬಲ ಇರುವವರಿಗಷ್ಟೇ ನಮ್ಮಲ್ಲಿ ಸ್ಥಾನ ನೀಡುತ್ತಿರುವುದು.

ಸಂಸ್ಥೆಯ ಸ್ಪಷ್ಟ ಸಂದೇಶ:

​”ನಾವು ಕೇವಲ ಪರೀಕ್ಷೆಗಳನ್ನು ಗೆಲ್ಲುವ ಯಂತ್ರಗಳನ್ನು ತಯಾರು ಮಾಡುವುದಿಲ್ಲ; ಸಮಾಜಕ್ಕೆ ಮಾದರಿಯಾಗಬಲ್ಲ, ನೈತಿಕತೆಯಿಂದ ಬದುಕಬಲ್ಲ ದಕ್ಷ ಆಡಳಿತಗಾರರನ್ನು ರೂಪಿಸುತ್ತೇವೆ. ಇಲ್ಲಿ ಶಿಸ್ತೇ ಶಕ್ತಿ, ಶಿಸ್ತೇ ಯಶಸ್ಸು!”.

ಶಿಸ್ತು ಏಕೆ ಬೇಕು?

ಅನೇಕರು ಕೇಳುತ್ತಾರೆ, “ಬರಿ ಓದಿದರೆ ಸಾಲದೇ? ಈ ಎಲ್ಲ ಕಟ್ಟುನಿಟ್ಟಿನ ಶಿಸ್ತುಗಳು ಏಕೆ ಬೇಕು?” ಎಂದು. ಅದಕ್ಕೆ ನಮ್ಮ ಉತ್ತರ ಇಲ್ಲಿದೆ:

  • ಮನಸ್ಸಿನ ಮೇಲಿನ ನಿಯಂತ್ರಣ: ಐಎಎಸ್/ಕೆಎಎಸ್ ಪರೀಕ್ಷೆಗಳು ಕೇವಲ ಜ್ಞಾನದ ಪರೀಕ್ಷೆಯಲ್ಲ, ಅವು ‘ತಾಳ್ಮೆ’ಯ ಪರೀಕ್ಷೆಗಳು. ಶಿಸ್ತುಬದ್ಧ ಜೀವನ ನಡೆಸುವವನಿಗೆ ಮಾತ್ರ ತನ್ನ ಮನಸ್ಸನ್ನು ಏಕಾಗ್ರತೆಯಿಂದ ಓದಿನತ್ತ ತಿರುಗಿಸಲು ಸಾಧ್ಯ. ಶಿಸ್ತಿಲ್ಲದವನಿಗೆ ಜ್ಞಾನವಿದ್ದರೂ ಅದನ್ನು ಸರಿಯಾದ ಸಮಯದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.
  • ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ : ಶಿಸ್ತು ಒಬ್ಬ ವ್ಯಕ್ತಿಯಲ್ಲಿ ‘ಸ್ಪಷ್ಟತೆ’ಯನ್ನು ತರುತ್ತದೆ. ಒಬ್ಬ ಅಧಿಕಾರಿ ಸಾವಿರಾರು ಜನರ ಬದುಕನ್ನು ಬದಲಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಭಾವನೆಗಳಿಗೆ ಮಣಿಯದೆ, ತತ್ವಗಳಿಗೆ ಬದ್ಧನಾಗಿರಲು ಶಿಸ್ತು ಅತಿ ಮುಖ್ಯ.
  • ಒತ್ತಡ ನಿರ್ವಹಣೆ: ಪರೀಕ್ಷೆಯ ಹಂತದಲ್ಲಿ ಮತ್ತು ಆಡಳಿತದ ಅವಧಿಯಲ್ಲಿ ವಿಪರೀತ ಒತ್ತಡವಿರುತ್ತದೆ. ಶಿಸ್ತಿನ ಜೀವನ ನಡೆಸುವವರಿಗೆ ಈ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದು ಸಹಜವಾಗಿಯೇ ರೂಢಿಯಾಗಿರುತ್ತದೆ.
  • ಸಮಾಜದ ನಂಬಿಕೆ: ಶಿಸ್ತಿಲ್ಲದ ಅಧಿಕಾರಿಯನ್ನು ಸಮಾಜ ಎಂದಿಗೂ ಗೌರವಿಸುವುದಿಲ್ಲ. ನಿಮ್ಮ ನಡವಳಿಕೆಯೇ ನಿಮ್ಮ ಆಡಳಿತದ ಕನ್ನಡಿಯಾಗಿರುತ್ತದೆ.

” ಶಿಸ್ತು ಎನ್ನುವುದು ನಿಮ್ಮ ಇಂದಿನ ಇಚ್ಛೆ ಮತ್ತು ನಿಮ್ಮ ಗುರಿಯ ನಡುವಿನ ಸೇತುವೆಯಿದ್ದಂತೆ. ಈ ಸೇತುವೆ ಗಟ್ಟಿಯಾಗಿದ್ದರೆ ಮಾತ್ರ ನೀವು ಯಶಸ್ಸಿನ ದಡ ಸೇರಲು ಸಾಧ್ಯ.”.

ವಾಸ್ತವ:

​”ಶಿಸ್ತು ಆರಂಭದಲ್ಲಿ ಕಷ್ಟವೆನಿಸಬಹುದು, ಆದರೆ ಅದರ ಫಲ ಸಿಹಿಯಾಗಿರುತ್ತದೆ.ವಿದ್ಯಾರ್ಥಿಗಳಿಗೆ ಶಿಸ್ತು ಎನ್ನುವುದು ‘ಶಿಕ್ಷೆ’ಯಲ್ಲ, ಅದು ಅವರ ‘ಗೆಲುವಿನ ಅಸ್ತ್ರ”

ಅಧ್ಯಾಯ 7

ಪ್ರತಿಷ್ಠಾನ ನೈತಿಕ ಪಥ

ಯಾವುದೇ ಪಠ್ಯಪುಸ್ತಕದ ಜ್ಞಾನ ಬೇಕಿಲ್ಲದ ಒಂದು ವಿಶೇಷ ಪ್ರವೇಶ ಪರೀಕ್ಷೆ ಮೂಲಕ ಮಾತ್ರವೇ ಪ್ರವೇಶ. ಬುದ್ಧಿವಂತ ಅಹಂಕಾರಿಗಳು ನಮಗೆ ಬೇಡ.ನೈತಿಕ ನಾಯಕರು ನಮಗೆ ಬೇಕು!

ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ವಿಷಯ ಜ್ಞಾನವನ್ನು ಪ್ರವೇಶ ಪಡೆದ ಅಭ್ಯರ್ಥಿಗಳಿಗೆ  ನಾವು ಅಕಾಡೆಮಿಯಲ್ಲಿ ಅತ್ಯಂತ ಶ್ರೇಷ್ಠವಾಗಿ ಕಲಿಸುತ್ತೇವೆ. ಅದು ನಮ್ಮ ಜವಾಬ್ದಾರಿ ಮತ್ತು ಆ ಹಂತದಲ್ಲಿ ನಾವು ಯಾರನ್ನೂ ಕೈಬಿಡುವುದಿಲ್ಲ. ಆದರೆ, ಪ್ರತಿಷ್ಠಾನ ಐಎಎಸ್ ಅಕಾಡೆಮಿಯ ಪ್ರವೇಶ ಪರೀಕ್ಷೆಯು ಅದಕ್ಕಿಂತ ಒಂದು ಹೆಜ್ಜೆ ಮುಂದಿದೆ.

ನೈತಿಕತೆ ಇಲ್ಲದ ಅಧಿಕಾರಕ್ಕೆ ಕಡಿವಾಣ ಹಾಕುವ ಪ್ರಯತ್ನ

ಇಂದು ಸಮಾಜಕ್ಕೆ ಕೇವಲ ವಿಷಯ ಜ್ಞಾನವಿರುವ ಅಧಿಕಾರಿಗಳ ಅಗತ್ಯವಿಲ್ಲ. ಏಕೆಂದರೆ, ಕೇವಲ ಬುದ್ಧಿವಂತಿಕೆಯಿದ್ದು ನೈತಿಕತೆ ಇಲ್ಲದಿದ್ದರೆ ಆ ಅಧಿಕಾರವು ‘ಶೋಷಣೆ’ಯ ಮಾರ್ಗವಾಗುತ್ತದೆ. ಅಧಿಕಾರ ಸಿಕ್ಕ ಮೇಲೆ ಅದು ಅಹಂಕಾರವಾಗಬಾರದು, ಸಮಾಜದ ಸೇವೆಯ ಅಸ್ತ್ರವಾಗಬೇಕು. ನೈತಿಕತೆ ಇಲ್ಲದ ಅಧಿಕಾರಿ ಸಮಾಜಕ್ಕೆ ಮುಳ್ಳು ಇದ್ದಂತೆ. ಇದಕ್ಕೆ ಕಡಿವಾಣ ಹಾಕಲು ನಾವು  ನೈತಿಕ ಪ್ರವೇಶ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಮೂಲಕ ‘ಸೇವಕ ಮನೋಭಾವ’ದವರನ್ನು ಗುರುತಿಸುವುದು  ನಮ್ಮ ಉದ್ದೇಶವಾಗಿದೆ.

ಈ ನೈತಿಕ ಪರೀಕ್ಷೆ ಏಕೆ ಅನಿವಾರ್ಯ?

ಪೋಷಕರೇ ಮತ್ತು ಗೌರವಾನ್ವಿತ ಅಧಿಕಾರಿಗಳೇ, ಒಮ್ಮೆ ಆಲೋಚಿಸಿ: ನಿಮ್ಮ ಮಗು ದೊಡ್ಡ ಅಧಿಕಾರಿಯಾಗಿ, ಅಧರ್ಮದ ಹಾದಿಯಲ್ಲಿ ನಡೆದು ಸಾವಿರಾರು ಜನರ ಕಣ್ಣೀರಿಗೆ ಕಾರಣವಾಗುವುದು ನಿಮಗೆ ಇಷ್ಟವೇ?.. ಅಥವಾ ನಿಮ್ಮ ಮಗು ಒಬ್ಬ ಜಿಲ್ಲಾಧಿಕಾರಿಯಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ತಂದು, ನಿಮ್ಮ ಮನೆತನದ ಗೌರವವನ್ನು ಹೆಚ್ಚಿಸುವುದು ನಿಮಗೆ ಬೇಕೇ?

ನಮ್ಮ ಈ ವಿಶಿಷ್ಟ ಪರೀಕ್ಷೆಯು ಎರಡನೇ ಹಾದಿಯನ್ನು ಆರಿಸಿಕೊಳ್ಳುವವರಿಗೆ ಮಾತ್ರ!.

ಪರೀಕ್ಷೆಯ ಸ್ವರೂಪ: ಇಲ್ಲಿ ಪುಸ್ತಕ ಓದುವ ಅವಶ್ಯಕತೆ ಇಲ್ಲ, ಬದಲಾಗಿ...

1.ನೈತಿಕ ಸಂದಿಗ್ಧತೆ:

ನಿಮ್ಮ ಕರ್ತವ್ಯ ಮತ್ತು ಕುಟುಂಬದ ನಡುವೆ ಸಂಘರ್ಷ ಉಂಟಾದಾಗ ನೀವು ಯಾರ ಪರವಾಗಿ ನಿಲ್ಲುತ್ತೀರಿ? ಎಂಬ ಸವಾಲುಗಳು.

2. ಮಾನವೀಯ ಸಂವೇದನೆ :

ಜನರ ಕಷ್ಟಗಳನ್ನು ನೋಡಿ ಸ್ಪಂದಿಸುವ ಗುಣ ನಿಮ್ಮಲ್ಲಿದೆಯೇ? ಅಥವಾ ಕೇವಲ ರೂಲ್ಸ್ ಬುಕ್ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೀರಾ?.

3. ಧೈರ್ಯ ಮತ್ತು ಪ್ರಾಮಾಣಿಕತೆ:

ತಪ್ಪು ಮಾಡುವ ಹಿರಿಯ ಅಧಿಕಾರಿಯನ್ನಾಗಲೀ ಅಥವಾ ರಾಜಕಾರಣಿಯನ್ನಾಗಲೀ ಎದುರಿಸುವ ನೈತಿಕ ಧೈರ್ಯ ನಿಮಗಿದೆಯೇ ಎಂಬ ಪರೀಕ್ಷೆ.

4. ಸಮಸ್ಯೆಗಳ ವಿಶ್ಲೇಷಣೆ :

ಒಂದು ಹಳ್ಳಿಯ ಬಡತನವನ್ನಾಗಲಿ ಅಥವಾ ರೈತರ ಕಷ್ಟವನ್ನಾಗಲಿ ನೀವು ಹೇಗೆ ಬಗೆಹರಿಸುತ್ತೀರಿ ಎಂಬ ವೈಜ್ಞಾನಿಕ ಮತ್ತು ಮಾನವೀಯ ಚಿಂತನೆ.

ಸಂಸ್ಥೆಯ ಕಟು ಸತ್ಯದ ಕಿವಿಮಾತು:

​”ಸಿಲಬಸ್‌ನಲ್ಲಿರುವ ವಿಷಯಗಳನ್ನು ಕಲಿಸಲು ನಮ್ಮಲ್ಲಿ ಶ್ರೇಷ್ಠ ಶಿಕ್ಷಕರಿದ್ದಾರೆ. ಆದರೆ ಸಮಾಜವನ್ನು ಪ್ರೀತಿಸುವ, ದೇಶದ ಬಗ್ಗೆ ಕಳಕಳಿ ಹೊಂದಿರುವ ಮತ್ತು ಶಿಸ್ತಿನಿಂದ ಬದುಕುವ ಗುಣವನ್ನು ಅಭ್ಯರ್ಥಿ ಮೊದಲೇ ಹೊಂದಿರಬೇಕು. ಅಂತಹ ಅಭ್ಯರ್ಥಿಗಳನ್ನು ಗುರುತಿಸುವುದೇ ಈ ಪ್ರವೇಶ ಪರೀಕ್ಷೆಯ ಉದ್ದೇಶ.

ನಮ್ಮ ಅಂತಿಮ ಸಂದೇಶ:

‘ನೈತಿಕತೆ ಇಲ್ಲದೆಯು ಯಶಸ್ಸು ಸಾಧ್ಯ ಆದರೆ ಅದು ಸಾಧನೆಯೂ ಅಲ್ಲ,ಸಾರ್ಥಕತೆಯೂ ಅಲ್ಲ ‘

“ಅಧಿಕಾರ ಎನ್ನುವುದು ಅಟ್ಟಹಾಸಕ್ಕೆ ಬಳಸುವ ಶಕ್ತಿಯಲ್ಲ, ಅದು ಅಸಹಾಯಕರ ಸೇವೆಗೆ ಸಿಕ್ಕ ಸುವರ್ಣಾವಕಾಶ. ನಿಮ್ಮ ಮಗುವಿನಲ್ಲಿ ಅಂತಹ ಸಾರ್ಥಕ ಅಧಿಕಾರಿಯನ್ನು ನೋಡಲು ಇಂದೇ ಈ ನೈತಿಕತೆಯ ಪರೀಕ್ಷೆಗೆ ನೋಂದಣಿ ಮಾಡಿ.”

ಜ್ಞಾನವನ್ನುಕಲಿಸಬಹುದು ಆದರೆ, ಚಾರಿತ್ರ್ಯವನ್ನು ಆಯ್ಕೆಮಾಡಬೇಕು- ಅದಕ್ಕಾಗಿಯೇ ನೈತಿಕ ಪ್ರವೇಶ ಪರೀಕ್ಷೆ .

ಎಲ್ಲರಿಗೂ ಧನ್ಯವಾದಗಳು.

ಮತ್ತು ಮುಂದಿನ ನೈತಿಕ ಪಥದ ಎಂಟನೇ ಅಧ್ಯಾಯಕ್ಕೆ ಸ್ವಾಗತ.

ಅಧ್ಯಾಯ 8

ಪ್ರತಿಷ್ಠಾನ ನೈತಿಕ ಪಥ

ನೀವು ನೈತಿಕ ಅಧಿಕಾರಿಗಳಾಗ ಬಲ್ಲಿರಾ? ಹಾಗಾದರೆ ಈ ನೈತಿಕ ಪ್ರವೇಶ ಪರೀಕ್ಷೆಯ ಮಾದರಿ ಪ್ರಶ್ನೆಗಳ ಭಂಡಾರವನ್ನು ಗಮನಿಸಿ.

ಈ 10 ಪ್ರಶ್ನೆಗಳು ನಿಮ್ಮ ಆಡಳಿತಾತ್ಮಕ ಪಕ್ವತೆಯನ್ನು ಅಳೆಯಲಿವೆ!

ನಮ್ಮ ಪ್ರವೇಶ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ, ನಿಮ್ಮ ಆಲೋಚನಾ ಕ್ರಮವನ್ನು ತಿಳಿಯಲು ನಡೆಸುವ ತರಬೇತಿಯ ಮೊದಲ ಹೆಜ್ಜೆ. ನೀವು ಒಬ್ಬ ಅಧಿಕಾರಿಯಾಗಲು ಮಾನಸಿಕವಾಗಿ ಮತ್ತು ನೈತಿಕವಾಗಿ ಎಷ್ಟು ಸಿದ್ಧರಿದ್ದೀರಿ ಎಂಬುದನ್ನು ತಿಳಿಯಲು ಈ ಕೆಳಗಿನ 10 ಮಾದರಿ ಪ್ರಶ್ನೆಗಳಿಗೆ ಉತ್ತರಿಸಿ:

ಪ್ರಶ್ನೆ 1. ನೈತಿಕ ಸಂಘರ್ಷಕ್ಕೆ ಸಂಬಂಧಿಸಿದ್ದು, ನೀವು ಒಬ್ಬ ಜಿಲ್ಲಾಧಿಕಾರಿ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಲಾದ ಧಾರ್ಮಿಕ ಕೇಂದ್ರವೊಂದನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆದರೆ ಅದನ್ನು ತೆರವುಗೊಳಿಸಲು ಹೋದರೆ ದೊಡ್ಡ ಮಟ್ಟದ ಕೋಮು ಗಲಭೆಯಾಗುವ ಸಾಧ್ಯತೆಯಿದೆ. ನಿಮ್ಮ ನಿರ್ಧಾರವೇನು?

ಪ್ರಶ್ನೆ 2. ಪ್ರಾಮಾಣಿಕತೆಯ ಪರೀಕ್ಷೆ: ನಿಮ್ಮ ಮೇಲಧಿಕಾರಿಯೊಬ್ಬರು ಒಂದು ಅಕ್ರಮ ಫೈಲಿಗೆ ಸಹಿ ಹಾಕುವಂತೆ ನಿಮಗೆ ಒತ್ತಡ ಹೇರುತ್ತಿದ್ದಾರೆ. ಸಹಿ ಹಾಕದಿದ್ದರೆ ನಿಮ್ಮನ್ನು ದೂರದ ಊರಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಂತಹ ಸಮಯದಲ್ಲಿ ನಿಮ್ಮ ನಿಲುವು ಏನು?

ಪ್ರಶ್ನೆ 3. ಸಮಯ ಪ್ರಜ್ಞೆ: ಒಬ್ಬ ಅಭ್ಯರ್ಥಿಯಾಗಿ ನೀವು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದೀರಿ. ಹಾದಿಯಲ್ಲಿ ಒಬ್ಬ ವ್ಯಕ್ತಿ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಿದರೆ ನಿಮ್ಮ ಪರೀಕ್ಷೆ ತಪ್ಪಿಹೋಗುತ್ತದೆ. ನೀವು ಏನು ಮಾಡುತ್ತೀರಿ?

ಪ್ರಶ್ನೆ 4. ಸಾಮಾಜಿಕ ಜವಾಬ್ದಾರಿ: ನಿಮ್ಮ ತಾಲ್ಲೂಕಿನಲ್ಲಿ ಒಬ್ಬ ಪ್ರಭಾವಿ ವ್ಯಕ್ತಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಅವರಿಗೆ ಸ್ಥಳೀಯ ರಾಜಕಾರಣಿಗಳ ಬೆಂಬಲವಿದೆ. ಒಬ್ಬ ಅಧಿಕಾರಿಯಾಗಿ ನೀವು ಆ ಅಕ್ರಮವನ್ನು ಹೇಗೆ ತಡೆಯುತ್ತೀರಿ?

ಪ್ರಶ್ನೆ 5. ಶಿಸ್ತಿನ ಮೌಲ್ಯ : ನಿಮ್ಮ ಅಕಾಡೆಮಿಯ ನಿಯಮದ ಪ್ರಕಾರ ‘ಏಕವಚನ’ ಬಳಸುವುದು ನಿಷಿದ್ಧ. ಆದರೆ ನಿಮ್ಮ ಆತ್ಮೀಯ ಸ್ನೇಹಿತನೊಬ್ಬ ಪದೇ ಪದೇ ಶಿಸ್ತು ಉಲ್ಲಂಘಿಸುತ್ತಿದ್ದಾನೆ. ನೀವು ಅದನ್ನು ಸಂಸ್ಥೆಯ ಗಮನಕ್ಕೆ ತರುತ್ತೀರಾ ಅಥವಾ ಸ್ನೇಹಕ್ಕಾಗಿ ಸುಮ್ಮನಿರುತ್ತೀರಾ?

ಪ್ರಶ್ನೆ 6. ಸಂಕಷ್ಟದಲ್ಲಿ ನಿರ್ಧಾರ: ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಸರ್ಕಾರದ ಅನುದಾನ ಸೀಮಿತವಾಗಿದೆ. ನೀವು ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುತ್ತೀರಾ ಅಥವಾ ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಆದ್ಯತೆ ನೀಡುತ್ತೀರಾ? ಯಾಕೆ?

ಪ್ರಶ್ನೆ 7. ಲಿಂಗ ಸಮಾನತೆ : ನಿಮ್ಮ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ತಾರತಮ್ಯದ ದೂರು ನೀಡುತ್ತಾರೆ. ಆದರೆ ದೂರು ನೀಡಿದ ವ್ಯಕ್ತಿ ನಿಮ್ಮ ದಕ್ಷ ಕೆಲಸಗಾರರಲ್ಲಿ ಒಬ್ಬರು. ಅಂತಹ ಸಮಯದಲ್ಲಿ ನೀವು ನಿಷ್ಪಕ್ಷಪಾತ ತನಿಖೆ ಮಾಡುತ್ತೀರಾ?

ಪ್ರಶ್ನೆ 8. ದಕ್ಷತೆಯ ಪರೀಕ್ಷೆ : ನಿಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಹಿತಿ ನಿಮಗೆ ಸಿಗುತ್ತದೆ. ಆದರೆ ನಿಮ್ಮ ಕೆಳಹಂತದ ಸಿಬ್ಬಂದಿಯೆಲ್ಲರೂ ಅದರಲ್ಲಿ ಶಾಮೀಲಾಗಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸಲು ನಿಮ್ಮ ಮೊದಲ ಹೆಜ್ಜೆ ಏನು?

ಪ್ರಶ್ನೆ 9. ತಾಳ್ಮೆಯ ಪರೀಕ್ಷೆ: ಜನಸಾಮಾನ್ಯರು ತಮ್ಮ ಕೆಲಸ ಆಗುತ್ತಿಲ್ಲ ಎಂದು ನಿಮ್ಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಜನಸಮೂಹವನ್ನು ನೀವು ಶಾಂತಗೊಳಿಸಲು ಯಾವ ರೀತಿ ಸಂವಹನ ನಡೆಸುತ್ತೀರಿ?

ಪ್ರಶ್ನೆ 10. ದೂರದೃಷ್ಟಿ: “ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಅಭಿಯಾನದ ಮೂಲಕ ನೀವು ಅಧಿಕಾರಿಯಾದ ನಂತರ, ನಿಮ್ಮ ತಾಲ್ಲೂಕಿನಲ್ಲಿ ನೀವು ತರಬಯಸುವ ಮೊದಲ ಮೂರು ಬದಲಾವಣೆಗಳು ಯಾವುವು?                          

ಪ್ರತಿಷ್ಠಾನದ ಸಂದೇಶ:

ಈ ಪ್ರಶ್ನೆಗಳಿಗೆ  ನೀವು ನೀಡುವ “ಸರಿಯಾದ ಉತ್ತರಗಳಲ್ಲಿ ಕಾಣಿಸಿಕೊಳ್ಳುವ ನೈತಿಕತೆ, ಧೈರ್ಯ, ಮಾನವೀಯತೆ ಮತ್ತು ಜವಾಬ್ದಾರಿತನ — ಇವೇ ನಿಮ್ಮನ್ನು ಒಬ್ಬ ಉತ್ತಮ ಅಧಿಕಾರಿಯನ್ನಾಗಿ ರೂಪಿಸುವ ಅಂಶಗಳು. ನಿಮ್ಮ ಉತ್ತರವೇ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ! ಇಲ್ಲಿ ನೀವು ನೀಡುವ ಉತ್ತರಕ್ಕಿಂತ ‘ಉದ್ದೇಶ’ ಮುಖ್ಯ!

​ಓದುಗರಲ್ಲಿ ಗೊಂದಲ ಬೇಡ, ಈ ಮೇಲಿನ ಪ್ರಶ್ನೆಗಳಿಗೆ ನೀವು ನೀಡುವ ಉತ್ತರಗಳಲ್ಲಿ ನಾವು ‘ಸರಿ ಅಥವಾ ತಪ್ಪು’ ಎಂದು ಹುಡುಕುವುದಿಲ್ಲ. ಬದಲಿಗೆ:

  • ನಿಮ್ಮ ಆಲೋಚನೆಯಲ್ಲಿ ಪ್ರಾಮಾಣಿಕತೆ ಎಷ್ಟಿದೆ?
  • ಕಷ್ಟದ ಸಮಯದಲ್ಲಿ ನೀವು ಧೃತಿಗೆಡದೆ, ಯೋಚಿಸುತ್ತೀರಾ?
  • ನಿಮ್ಮಲ್ಲಿ ಸಮಾಜದ ಬಗ್ಗೆ ಕಳಕಳಿ ಇದೆಯೇ?

ಒಂದು ವೇಳೆ ನಿಮ್ಮ ಉತ್ತರಗಳು ಪರಿಪೂರ್ಣವಾಗಿಲ್ಲದಿದ್ದರೂ ಪರವಾಗಿಲ್ಲ, ಆದರೆ ನಿಮ್ಮಲ್ಲಿ ನೈತಿಕವಾಗಿ ಕಲಿಯುವ ಹಂಬಲವಿದ್ದರೆ, ಅದನ್ನು ಪಕ್ವಗೊಳಿಸಿ ನಿಮ್ಮನ್ನು ಒಬ್ಬ ಯಶಸ್ವಿ ಅಧಿಕಾರಿಯನ್ನಾಗಿ ರೂಪಿಸಲು ಪ್ರತಿಷ್ಠಾನ ಅಕಾಡೆಮಿ ಸಿದ್ಧವಿದೆ.

“ಪೋಷಕರೇ, ಇಂತಹ ಸಂಕೀರ್ಣ ಸನ್ನಿವೇಶಗಳನ್ನು ಎದುರಿಸುವ ಶಕ್ತಿ ನಿಮ್ಮ ಮಗುವಿಗೆ ಬರಬೇಕೆಂದು ನೀವು ಬಯಸುತ್ತೀರಾ? ಹಾಗಿದ್ದರೆ ಅವರಿಗೆ ಪ್ರತಿಷ್ಠಾನದ ನೈತಿಕ ತರಬೇತಿಯ ಅಗತ್ಯವಿದೆ.”

ಎಲ್ಲರಿಗೂ ಧನ್ಯವಾದಗಳು.

ಮುಂದಿನ ಒಂಬತ್ತನೇ ಅಂತಿಮ ಅಧ್ಯಾಯ ಮತ್ತು ಕೊನೆಯ ಅನುಬಂಧ 1 ಚಟುವಟಿಕೆ, ಅನುಬಂಧ 2  ಪ್ರತಿಷ್ಠಾನ ಪ್ರತಿಜ್ಞಾವಿಧಿಗೆ ಸ್ವಾಗತ ಕೋರುತ್ತೇವೆ . ಹಾಗು ಪ್ರತಿಷ್ಠಾನ ಆಲ್ಬಮ್ ಹಾಡುಗಳ ಕೇಳುಗರಿಗೆ ಶುಭಾಶಯ ಕೋರುತ್ತೇವೆ.

ಅಧ್ಯಾಯ 9

ಹೊಸ ಪಯಣದ ಆರಂಭ - ನೋಂದಣಿ ಮತ್ತು ಸಂಪರ್ಕ.

ನಿಮ್ಮ ಕನಸಿಗೆ ಜೀವ ತುಂಬುವ ಸಮಯ ಈಗ ಬಂದಿದೆ.

ಇಲ್ಲಿಯವರೆಗೆ ನೀವು ಓದಿದ ಅಧ್ಯಾಯಗಳ ಪ್ರತಿಯೊಂದು ಪುಟವೂ ಕೇವಲ ಮಾಹಿತಿಯಲ್ಲ.  ಅದು ನಿಮ್ಮ ಭವಿಷ್ಯದ ದಾರಿದೀಪ. “ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಎನ್ನುವ ಈ ಮಹತ್ವಾಕಾಂಕ್ಷೆಯ ಅಭಿಯಾನದ ಭಾಗವಾಗಲು ಮತ್ತು ನೈತಿಕ ಆಡಳಿತದ ಹೊಸ ಪೀಳಿಗೆಯನ್ನು ಪ್ರತಿನಿಧಿಸಲು ನೀವು ಸಿದ್ಧರಿದ್ದೀರಾ?. ಹಾಗಿದ್ದಲ್ಲಿ, ನಿಮ್ಮ ಮೊದಲ ಹೆಜ್ಜೆ ಇಲ್ಲಿದೆ:

1. ಪ್ರವೇಶ ಪರೀಕ್ಷೆಯ ನೋಂದಣಿ:

ನಮ್ಮ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನೆನಪಿರಲಿ, ಇಲ್ಲಿ ಅಂಕಗಳಿಗಿಂತ ನಿಮ್ಮ ವ್ಯಕ್ತಿತ್ವಕ್ಕೆ ಮೊದಲ ಆದ್ಯತೆ.

ನೋಂದಣಿ ಶುಲ್ಕ: ₹200 (ಕೇವಲ ಆನ್‌ಲೈನ್ ನೋಂದಣಿ ಮೂಲಕ)

​ವೆಬ್‌ಸೈಟ್:  www.pratishthanaias.com

2. ಪರೀಕ್ಷಾ ಕೇಂದ್ರಗಳು ಮತ್ತು ದಿನಾಂಕ:

ಪ್ರತಿ ಭಾನುವಾರ ಆಫ್ಲೈನ್ ಪರೀಕ್ಷೆ: ಬೆಳಿಗ್ಗೆ 11:00 ಗಂಟೆಯಿಂದ 1:00 ಗಂಟೆಯವರೆಗೆ.

ಪರೀಕ್ಷಾ ಕೇಂದ್ರ: ಪ್ರತಿಷ್ಠಾನ ಐಎಎಸ್ ಅಕಾಡೆಮಿ, ಚಂದ್ರಾ ಲೇಔಟ್.

ಆನ್ಲೈನ್ ಪರೀಕ್ಷೆ: ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆವರೆಗೆ.

ನೋಂದಾಯಿತ ಅಭ್ಯರ್ಥಿಗಳಿಗೆ ಪರೀಕ್ಷಾ ಮಾದರಿ ಮತ್ತು ಇತರೆ ಮಾಹಿತಿಯನ್ನು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ  ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ:

ನಿಮಗೆ ಯಾವುದೇ ಗೊಂದಲಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ ನಮ್ಮ ತಂಡವನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಕಚೇರಿ ವಿಳಾಸ:

ಪ್ರತಿಷ್ಠಾನ ಐಎಎಸ್ ಅಕಾಡೆಮಿ

ನಂ. 10/1, 9ನೇ ಕ್ರಾಸ್, ಬಿಬಿಎಂಪಿ ಕಟ್ಟಡ,

ಅರುಂಧತಿ ನಗರ, ಚಂದ್ರ ಲೇಔಟ್, ಬೆಂಗಳೂರು.

ದೂರವಾಣಿ: 9036669964. 9036669968. 9036669954.

ಪ್ರತಿಷ್ಠಾನದ ಅಂತಿಮ ಮಾತು.

ಅಧಿಕಾರ ಎಂಬುದು ಕೇವಲ ಒಂದು ಕುರ್ಚಿಯಲ್ಲ, ಅದು ಸಮಾಜಕ್ಕೆ ನೀವು ಸಲ್ಲಿಸಬೇಕಾದ ಋಣ. ಆ ಋಣವನ್ನು ತೀರಿಸುವ ಶಕ್ತಿ ನಿಮ್ಮಲ್ಲಿದೆ, ಎಂದು ನಮಗೆ ನಂಬಿಕೆಯಿದೆ. ಬನ್ನಿ, ಒಟ್ಟಾಗಿ ನೈತಿಕ ಆಡಳಿತದ ಕರ್ನಾಟಕವನ್ನು ಕಟ್ಟೋಣ.

ಶುಭವಾಗಲಿ!

ಅನುಬಂಧ 1 - ಚಟುವಟಿಕೆ ಪುಟ

ನನ್ನ ಕನಸಿನ ಆಡಳಿತ

"ಅಧಿಕಾರ ಎಂಬುದು ಅನುಭವಿಸಲಿಕ್ಕಲ್ಲ, ಜನಸಾಮಾನ್ಯರ ಬದುಕು ಹಸನು ಮಾಡಲಿಕ್ಕೆ."

ಪ್ರಶ್ನೆ 1:

ನೀವು ಜಿಲ್ಲಾಧಿಕಾರಿಯಾದ ಮೊದಲ ದಿನ, ನಿಮ್ಮ ಜಿಲ್ಲೆಯ ಜನರಿಗಾಗಿ ಮಾಡುವ ಮೊದಲ ಮೂರು ಮಹತ್ವದ ಕೆಲಸಗಳು ಯಾವುವು?

ಪ್ರಶ್ನೆ 2:

ಪ್ರತಿಷ್ಠಾನ ಐಎಎಸ್ ಅಕಾಡೆಮಿಯ “ನೈತಿಕ ಪಥ” ಮತ್ತು “ಗುರುಕುಲ ಶಿಸ್ತು” ನಿಮ್ಮ ಜೀವನದ ಗುರಿ ತಲುಪಲು ಹೇಗೆ ಸಹಕಾರಿ ಎಂದು ನೀವು ಭಾವಿಸುತ್ತೀರಿ?

ಪ್ರಶ್ನೆ 3:

ನೀವು ಆಡಳಿತಗಾರರಾದರೆ ನಿಮ್ಮ ತಂದೆ-ತಾಯಿಯ ಕನಸನ್ನು ಹೇಗೆ ನನಸು ಮಾಡುತ್ತೀರಿ?.  ನಿಮ್ಮ ಅನಿಸಿಕೆ ಗಳನ್ನು  ಬರೆದು ಕಳುಹಿಸಿ.

ಸೂಚನೆ : ನೀವು ಬರೆದ ಈ ಉತ್ತರಗಳನ್ನು ಫೋಟೋ ತೆಗೆದು  ವಾಟ್ಸಾಪ್ ಅಥವಾ ಇ – ಮೇಲ್ ಮೂಲಕ ಕಳುಹಿಸಿ.

ಅತ್ಯುತ್ತಮವಾಗಿ ಆಲೋಚಿಸುವ ಅಭ್ಯರ್ಥಿಗಳಿಗೆ ಪ್ರವೇಶಾತಿಯ ಸಂದರ್ಶನದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.

E – Mail – pratishthanaias25@gmail.com
What’s app – 9036669964,9036669968

ಅನುಬಂಧ 2

ಪ್ರತಿಷ್ಠಾನ' ಪ್ರತಿಜ್ಞೆ ' ನೈತಿಕ ಸಂಕಲ್ಪ.

“ನನ್ನ ಚಾರಿತ್ರ್ಯವೇ ನನ್ನ ದೇಶಕ್ಕೆ ಕೊಡುಗೆ” ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿ ಯಾದ ನಾನು,

ನನ್ನ ಹೆತ್ತವರ ನಿಸ್ವಾರ್ಥ ತ್ಯಾಗಕ್ಕೆ ಮತ್ತು ಭಾರತದ ಪವಿತ್ರ ಸಂವಿಧಾನಕ್ಕೆ ಸಾಕ್ಷಿಯಾಗಿ, ಈ ಪವಿತ್ರ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದೇನೆ.

ನನ್ನ ಏಳಿಗೆಗಾಗಿ ನನ್ನ ಹೆತ್ತವರು ಮಾಡುತ್ತಿರುವ ಪ್ರತಿಯೊಂದು ತ್ಯಾಗ ಮತ್ತು ಅವರ ಅಚಲ ನಂಬಿಕೆಗೆ ನಾನು ಸದಾ ಬದ್ಧನಾಗಿರುತ್ತೇನೆ.

ನನ್ನಲ್ಲಿರುವ ಸೋಮಾರಿತನ, ಅಶಿಸ್ತು ಮತ್ತು ಆಲಸ್ಯವನ್ನು ಇಂದೇ ತ್ಯಜಿಸಿ, ಜಾಗೃತ ಮನಸ್ಸಿನಿಂದ ನನ್ನ ಗುರಿಯತ್ತ ದಿಟ್ಟ ಹೆಜ್ಜೆ ಹಾಕುತ್ತೇನೆ.

ನಾನು ಪಡೆಯುವ ಅಧಿಕಾರವು ಕೇವಲ ನನ್ನ ವೈಯಕ್ತಿಕ ಸಾಧನೆಗಾಗಿ ಅಲ್ಲ; ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸಲು ಮೀಸಲಾಗಿರುತ್ತದೆ.

ಹಣದ ವ್ಯಾಮೋಹಕ್ಕೆ ಬಲಿಯಾಗದೆ, ಯಾವುದೇ ಭ್ರಷ್ಟಾಚಾರದ ಕಳಂಕವಿಲ್ಲದ ‘ನೈತಿಕ ಅಧಿಕಾರಿ’ಯಾಗಿ ಬದುಕಲು ನಾನು ಬದ್ಧನಾಗಿರುತ್ತೇನೆ.

ಪ್ರತಿಷ್ಠಾನ ಐಎಎಸ್ ಅಕಾಡೆಮಿಯ ಶಿಸ್ತನ್ನು ನನ್ನ ಜೀವನದ ಶ್ವಾಸವಾಗಿಸಿಕೊಂಡು, ಸಂಸ್ಥೆಯ ಘನತೆ ಮತ್ತು ಪ್ರತಿಷ್ಠೆಯನ್ನು ಎತ್ತಿ ಹಿಡಿಯುತ್ತೇನೆ.

ಈ ನೈತಿಕ ಪಥದಲ್ಲಿ ದೃಢವಾಗಿ ಸಾಗುತ್ತಾ, ‘ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ’ ಎಂಬ ಮಹೋನ್ನತ ಆಶಯವನ್ನು ಈಡೇರಿಸಲು ನನ್ನ ಸಂಪೂರ್ಣ ಶಕ್ತಿಯನ್ನು ಸಮರ್ಪಿಸುತ್ತೇನೆ.

                                                                ಇದು ನನ್ನ ಹೆತ್ತವರಿಗೆ, ನನ್ನ ಸಮಾಜಕ್ಕೆ ಮತ್ತು ನನ್ನ ದೇಶಕ್ಕೆ ನಾನು ನೀಡುತ್ತಿರುವ ಪವಿತ್ರ ವಚನ.”

ಅಭ್ಯರ್ಥಿಯ ಸಹಿ: ________

Scroll to Top